ಬೆಳ್ತಂಗಡಿ : ರಸಪ್ರಶ್ನೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಶೌರ್ಯ.ಎಸ್.ವಿ
ಬೆಳ್ತಂಗಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-2 ಇಲ್ಲಿನ 8ನೇ ತರಗತಿಯಲ್ಲಿ ಓದುತ್ತಿರುವ ಶೌರ್ಯ.ಎಸ್.ವಿ ಯವರು ಮಹಾತ್ಮ ಗಾಂಧೀಜಿ ರಸಪ್ರಶ್ನೆಯಲ್ಲಿ ಭಾಗವಹಿಸಿ 87% ಅಂಕ ಗಳಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶೌರ್ಯಳಿಗೆ ಶುಭ ಹಾರೈಸಲು, ಬೆಳ್ತಂಗಡಿಯ ನಗುಮೊಗದ ಅರಸ ಮಾನ್ಯ ಶ್ರೀ ಹರೀಶ್ ಪೂಂಜ ಇವರು ಡಾಕ್ಟರ್ ಶೌರ್ಯ ಇವರ ಮನೆಗೆ ಭೇಟಿ ನೀಡಿ, ಸನ್ಮಾನಿಸಿ ಶುಭ ಹಾರೈಸಿದ್ದಾರೆ. ನಂತರ ಮಾತನಾಡಿದ ಅವರು ನಿಮ್ಮ ಮುಂದಿನ ವಿದ್ಯಾಭ್ಯಾಸ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಅದಕ್ಕೆ ಬೇಕಾದ ಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಇನ್ನು ಮುಂದಕ್ಕೂ ಅನೇಕ ಕಾರ್ಯಕ್ರಮದಲ್ಲಿ ನಿಮ್ಮ ಮಗಳನ್ನು ಕಳುಹಿಸಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ತನ್ನಿಂದ ಆಗುವ ಸಹಾಯವನ್ನು ಮಾಡುತ್ತೇನೆ. ನಿಮ್ಮ ಇಬ್ಬರು ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಹಾಯವನ್ನು ನಾನು ಮಾಡುತ್ತೇನೆ ಎಂದು ಪೋಷಕರೊಂದಿಗೆ ಹೇಳಿ ಭರವಸೆ ನೀಡಿದರು.
ಈಕೆ ಧರ್ಮಸ್ಥಳ ಗ್ರಾಮದ ನಾರ್ಯದ ನಿವಾಸಿಯಾಗಿದ್ದು, ಶೌರ್ಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತನ್ನ 12 ವರ್ಷದಲ್ಲೇ 25 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಗಳಿಸಿರುವುದು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿದೆ. ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಈ ಮೂರು ವೇದಿಕೆಗೆ ಆಯ್ಕೆಯಾಗಿದ್ದಾರೆ.
ಶೌರ್ಯ ಇವರ ತಾಯಿ ಮಾತನಾಡುತ್ತಾ ‘ನನಗೆ ಹಲವು ವರ್ಷಗಳ ಹಿಂದೆ ಸುರೇಶ್ ಎಂಬ ಮೂಡಿಗೆರೆಯ ಯುವಕನೊಂದಿಗೆ ವಿವಾಹವಾಯಿತು. ನಂತರ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ತೀರಿಕೊಂಡರು. ಅಲ್ಲಿಂದ ಇಬ್ಬರು ಹೆಣ್ಣು ಮಕ್ಕಳನ್ನು ಊರಿಗೆ ಕರೆತಂದು ಸಣ್ಣ ಗುಡಿಸಲು ಮನೆಯಲ್ಲಿ ಇರುವುದನ್ನು ಕಂಡು ನನಗೆ ಆಸರೆ ಎಂಬ ಮನೆಯನ್ನು ವೀರಕೇಸರಿ ಬೆಳ್ತಂಗಡಿ ಇವರು ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.
12 ವರ್ಷದ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಂತಹ ದೊಡ್ಡ ವೇದಿಕೆಗೆ ಆಯ್ಕೆಯಾಗಿ ಹೆತ್ತವರಿಗೆ,ಊರಿನವರಿಗೆ,ಶಾಲೆಗೆ,ಗುರುಗಳಿಗೆ ಕೀರ್ತಿ ತಂದುಕೊಟ್ಟಿದ್ದಾಳೆ.