ಮನೆಯ ಟೆರೇಸ್ ಮೇಲೆ ಗಾಂಜಾ ಸಸಿ ಬೆಳೆಸಿ ಮಾರಾಟ | ವ್ಯಕ್ತಿ ಬಂಧನ

ಮನೆಯ ಟೆರೇಸ್‌ನಲ್ಲಿ ಗಾಂಜಾ ಸಸಿಗಳನ್ನು ಮಾರಾಟದ ಉದ್ದೇಶದಿಂದ ಬೆಳೆಸಿದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ ಘಟನೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದೆ.

ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಪೂಝ್ಎಂಬಾತನೇ (22) ಬಂಧಿತ ಆರೋಪಿ. ಈತ ಮಂಗಳೂರಿನ ಕಾಲೇಜು ವಿದ್ಯಾರ್ಥಿ.


Ad Widget

Ad Widget

Ad Widget

Ad Widget

Ad Widget

Ad Widget

ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ, ಆ ಮನೆಯ ಟೆರೇಸ್‌ನಲ್ಲಿ ನೀರಿನ ಬಾಟಲಿಯ ಮೇಲ್ಭಾಗವನ್ನು ಕತ್ತರಿಸಿ ಅದರಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆಸಿದ್ದ ಎಂದು ವರದಿಯಾಗಿದೆ.

ಈತ ಇದನ್ನು ಸ್ವಂತ ಬಳಕೆಗೆ ಮಾತ್ರವಲ್ಲದೆ ಮಾರಾಟದ ಉದ್ದೇಶಕ್ಕಾಗಿಯೂ ಕೂಡಾ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ಕಾಲೇಜು ವಿದ್ಯಾರ್ಥಿ ಆಗಿರುವ ಈತ ಅಲ್ಲಿಂದಲೇ ಇದರ ಬೀಜಗಳನ್ನು ಸಂಗ್ರಹಿಸಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: