ಪಿಕಪ್ ವಾಹನದಲ್ಲಿ ಹಾಕಿದ ಹಾಡು 10 ಮಂದಿಯ ಬಲಿ ಪಡೆಯಿತು| ಹೇಗೆ?
ಪಿಕಪ್ ವಾಹನಕ್ಕೆ ಹಾಕಿದ ಡಿಜೆ ಹಾಡಿನ ಸಿಸ್ಟಮ್ 10 ಮಂದಿಯನ್ನು ಬಲಿ ಪಡೆದಿದೆ. ಡಿಜೆ ಸಿಸ್ಟಮ್ ನಿಂದಾಗಿ ಈ ಅವಘಡ ನಡೆದಿದೆ. ಪ್ರಯಾಣಿಕರನ್ನು ಗಾಡಿಯಲ್ಲಿ ಕರೆದುಕೊಂಡು ಹೋದಾಗ ಗಾಡಿಯಲ್ಲಿ ಹಾಕಿದ ಡಿಜೆ ಸಿಸ್ಟಮ್ ನಿಂದ ವಿದ್ಯುತ್ ಪ್ರವಹಿಸಿ ಈ 10 ಮಂದಿ ದಾರುಣ ಸಾವು ಕಂಡಿದ್ದಾರೆ.
ಈ ದುರ್ಘಟನೆಯಿಂದ ಗಾಡಿಯಲ್ಲಿದ್ದ 10 ಮಂದಿಗೆ ವಿದ್ಯುತ್ ಪ್ರವಹಿಸಿ ಮರಣ ಹೊಂದಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಜಲ್ವೇಶ್ ಬಳಿ ನಡೆದಿದೆ. ಜಲ್ವೇಶ್‌ಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಬೆಂಕಿಗೆ ದಹಿಸಿ ಹೋಗಿದ್ದರೆ, 16ಜನ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೆಖಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಜೆ ಸಿಸ್ಟಮ್‌ಗಾಗಿ ಬಳಸುತ್ತಿದ್ದ ಜನರೇಟರ್‌ನ ವೈರಿಂಗ್‌ನಲ್ಲಿ ಉಂಟಾದ ಸಮಸ್ಯೆಯೇ ಈ ಅನಾಹುತಕ್ಕೆ ಕಾರಣ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.
ಈ ಘಟನೆಗೆ ಕಾರಣವಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಈ ಘಟನೆ ನಡದಾಗಲೇ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೃತ ವ್ಯಕ್ತಿಗಳ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.