ಕಾಮನ್ ವಲ್ತ್ ಗೇಮ್ಸ್ ನಲ್ಲಿ ಕಾಂಡೋಂ ಬಳಕೆ ಜಾಸ್ತಿ| ಯಾಕಾಗಿ? ಕ್ರೀಡಾಪಟುಗಳು ಬಳಸಿದ 4000 ಕ್ಕೂ ಹೆಚ್ಚು ಕಾಂಡೋಂ ಚರಂಡಿಯಲ್ಲಿ ಬ್ಲಾಕ್ ಆದ ಕಥೆ ಗೊತ್ತೇ?
ಬರ್ಮಿಂಗ್ಹ್ಯಾಮ್ ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಪದಕಕ್ಕಾಗಿ ಎಲ್ಲಾ ದೇಶಗಳ ಕ್ರೀಡಾಪಟುಗಳು ಪೈಪೋಟಿ ನಡೆಸುತ್ತಿದ್ದಾರೆ. ಭಾರತ ಇಲ್ಲಿಯವರೆಗೆ 6 ಪದಕ ಗೆದ್ದುಕೊಂಡಿದೆ. 3 ಚಿನ್ನ, 2 ಬೆಳ್ಳಿ, 1 ಕಂಚ ನ್ನು ತನ್ನ ಮಡಿಲಿಗೆ ಸೇರಿಸಿದೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
ಇದಕ್ಕಿಂತಲೂ ಈಗ ಚರ್ಚೆಯಾಗುತ್ತಿರುವುದು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಆರಂಭಿಕ 3 ದಿನದಲ್ಲಿ 1.50 ಲಕ್ಷ ಕಾಂಡೋಮ್‌ಗಳನ್ನು ಕ್ರೀಡಾಪಟುಗಳಿಗೆ ವಿತರಿಸಲಾಗಿದೆಯಂತೆ. ಹಾಗೂ ಈ ಕಾಂಡೋಂ ಬಳಕೆಯ ಲೆಕ್ಕಾಚಾರ ಟೂರ್ನಿ ಅಂತ್ಯದ ವೇಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇಂತಹುದುದೇ ಒಂದು ಘಟನೆ ಅಂದರೆ ಕಾಂಡೋಂ ಬಳಕೆಯ ಸುದ್ದಿ, 2010 ರಲ್ಲಿ ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರೀ ಸೌಂಡ್ ಮಾಡಿತ್ತು. ಇಲ್ಲಿ ಕ್ರೀಡೆಗಿಂತ ಹೆಚ್ಚಾಗಿ ಸುದ್ದಿಯಾಗಿದ್ದೇ ಈ ಕಾಂಡೋಂ. ಹೌದು, ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ, ಅಸಮರ್ಪಕ ವ್ಯವಸ್ಥೆ ಸೇರಿದಂತೆ ಹಲವು ಹಿನ್ನಡೆಗಳು ಭಾರತಕ್ಕೆ ಕಪ್ಪು ಚುಕ್ಕೆಯನ್ನು ತಂದಿತ್ತು. ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರದಿಂದ ಕೂಡಿತ್ತು. ಅಷ್ಟು ಮಾತ್ರವಲ್ಲದೇ ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲಾಗಿತ್ತು. ಪರಿಣಾಮ, ಬಳಕೆಯಾದ ಕಾಂಡೋಮ್‌ಗಳನ್ನು ಹೆಚ್ಚಿನ ಕ್ರೀಡಾಪಟುಗಳು ದೆಹಲಿ ಕ್ರೀಡಾಗ್ರಾಮದ ಚರಂಡಿಗೆ ಎಸೆದಿದ್ದು, ಇದರಿಂದ ಚರಂಡಿ ಸಂಪೂರ್ಣ ಬ್ಲಾಕ್ ಆಗಿ ಭಾರೀ ಸುದ್ದಿಯಾಗಿತ್ತು.
ಕಾಮನ್‌ವೆಲ್ತ್ ಗೇಮ್ಸ್ ಮುಗಿದ ಬಳಿಕ ಕ್ರೀಡಾ ಗ್ರಾಮದ ಚರಂಡಿ ನೀರು ಹರಿದು ಹೋಗಲು ಸಾಧ್ಯವಾಗದೆ ಬ್ಲಾಕ್ ಆಗಿತ್ತು. ಈ ವೇಳೆ ಸರಿಪಡಿಸಲು ಮುಂದಾದಾಗ ಇಲ್ಲಿನ ಅಸಲಿ ವಿಚಾರ ಬಯಲಾಗಿದೆ. ಚರಂಡಿಯಲ್ಲಿ 4,000ಕ್ಕೂ ಹೆಚ್ಚಿನ ಬಳಸಿದ ಕಾಂಡೋಮ್ ಸಿಕ್ಕಿತ್ತು.
2010 ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 7,000 ಕ್ರೀಡಾಪಟುಗಳು, ಕೋಚ್ ಹಾಗೂ ಸಿಬ್ಬಂದಿಗಳು ನೆಲೆಸಿದ್ದರು. ಸುರಕ್ಷತಾ ಲೈಂಗಿಕತೆಗೆ ಪ್ರತಿ ಕ್ರೀಡಾಕೂಟದಲ್ಲಿ ಉಚಿತ ಕಾಂಡೋಮ್ ನೀಡಲಾಗುತ್ತದೆ. ಕಾಮನ್‌ವೆಲ್ತ್ ಗೇಮ್ಸ್ ಮುಗಿದ ಬಳಿಕ ಕ್ರೀಡಾ ಗ್ರಾಮದ ಚರಂಡಿ ನೀರು ಹರಿದು ಹೋಗಲು ಸಾಧ್ಯವಾಗದೆ ಬ್ಲಾಕ್ ಆಗಿತ್ತು. ಈ ವೇಳೆ ಸರಿಪಡಿಸಲು ಮುಂದಾದಾಗ ಇಲ್ಲಿನ ಅಸಲಿ ವಿಚಾರ ಬಯಲಾಗಿದೆ.
ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಮುಗಿದ ಬಳಿಕ ಕಾಂಡೋಮ್ ವಿಷಯ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು.