ಕೇರಳದ ಎರಡು ಜಿಲ್ಲೆಗಳಲ್ಲಿ ಪತ್ತೆಯಾಯ್ತು ಆಫ್ರಿಕನ್ ಹಂದಿ ಜ್ವರ!
ಕೇರಳ: ಕಳೆದ ವಾರ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ವಯನಾಡ್ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಹಂದಿಗಳನ್ನು ಕೊಂದ ಬೆನ್ನಲ್ಲೇ, ಮತ್ತೆ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಹಂದಿ ಜ್ವರದ ಹೊಸ ಪ್ರಕರಣಗಳು ವರದಿಯಾಗಿವೆ.
ವಯನಾಡು ಮತ್ತು ಕಣ್ಣೂರಿನಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ರೋಗದ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಕಣ್ಣೂರಿನ ಜಿಲ್ಲಾಧಿಕಾರಿ ಕಚೇರಿ ಪಿಟಿಐಗೆ ತಿಳಿಸಿದೆ.
ವಯನಾಡಿನ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಾಜೇಶ್ ಅವರು, ಸುಲ್ತಾನ್ ಬತ್ತೇರಿಯ ನೆನ್ಮೆನಿ ಫಾರ್ಮ್ ಮತ್ತು ಅದರ ಸುತ್ತಮುತ್ತಲಿನ 193 ಹಂದಿಗಳನ್ನು ಈ ವಾರದಲ್ಲಿ ರೋಗ ಹರಡುವುದನ್ನು ತಡೆಯಲು ಕೊಲ್ಲಲಾಗುವುದು ಎಂದು ಪಿಟಿಐಗೆ ತಿಳಿಸಿದರು.
ಹಂದಿ ಜ್ವರವು ಹೊಸ ಪ್ರಕರಣವು ಜಿಲ್ಲೆಯ ನೆನ್ಮೇನಿ ಗ್ರಾಮದಲ್ಲಿ ವರದಿಯಾಗಿದೆ. ಹೊಸ ಪ್ರಕರಣದಿಂದ ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆ ಎಚ್ಚೆತ್ತುಕೊಂಡಿದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳಲ್ಲಿ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕವಾಗಿ ಹರಡುವ ರೋಗವಾಗಿದೆ. ಇದು ಮೊದಲ ಬಾರಿಗೆ ಪೂರ್ವ ಆಫ್ರಿಕಾದ ಕೀನ್ಯಾದಲ್ಲಿ 1921ರಲ್ಲಿ ಹಂದಿಗಳನ್ನು ಕೊಲ್ಲುವ ಕಾಯಿಲೆಯಾಗಿ ಪತ್ತೆಯಾಯಿತು. ಇದು ಪ್ರಾಣಿಗಳಲ್ಲಿ ವೈರಸ್ ಹರಡುವಲ್ಲಿ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗುತ್ತಿದೆ.
ವಯನಾಡ್ ಒಂದರಲ್ಲೇ 222 ಹಂದಿ ಸಾಕಣೆ ಕೇಂದ್ರಗಳಲ್ಲಿ 20,000 ಹಂದಿಗಳು ಈ ರೋಗ ಹರಡಿಕೊಂಡಿವೆ. ಮುಂಜಾಗೃತ ಕ್ರಮವಾಗಿ ಈ ರೋಗದ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.