ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಎದುರಾಯ್ತು ಕೂದಲು ಕೆದರಿಕೊಂಡು ಬಿಳಿ ಸೀರೆಯುಟ್ಟ ದೆವ್ವ! – ವೀಡಿಯೋ ವೈರಲ್
ಪ್ರಪಂಚ ಎಷ್ಟೇ ಮುಂದುವರಿದರೂ ಪುರಾತನದ ನಂಬಿಕೆಗಳು, ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಷ್ಟು ಜನ ಮೂಢ ನಂಬಿಕೆಗಳನ್ನು ನಂಬಿದರೆ, ಇನ್ನೂ ಕೆಲವಷ್ಟು ಜನ ಅದೆಲ್ಲ ಸುಮ್ಮನೆ ಎಂದು ಹೇಳಿ ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿರುವುದು ದೆವ್ವ. ಹೌದು. ಹಿರಿಯರು ಹೇಳುವ ಪ್ರಕಾರ ಇಂದಿಗೂ ದೆವ್ವಗಳು ಕಾಣಸಿಗುತ್ತದೆ. ಆದ್ರೆ, ಇದು ಕಣ್ಣಿಗೆ ಬೀಳುವುದು ವಿರಳ. ಒಂದು ವೇಳೆ ಕಂಡವರು ಮಾತ್ರ ಒಂದು ದಿನ ಭಯದಿಂದ ಮಲಗದೆ ಇರಲು ಸಾಧ್ಯವೇ ಇಲ್ಲ.
ಇದೀಗ ಅದೇ ತರಹದ ವೀಡಿಯೋ ಒಂದು ವೈರಲ್ ಆಗಿದ್ದು, ನೋಡುಗರನ್ನು ಒಮ್ಮೆ ಬೆಚ್ಚಿಬೀಳಿಸುವಂತಿದೆ. ರಾತ್ರಿಯೆಲ್ಲಾ ದೆವ್ವಗಳು ಓಡಾಡುತ್ತೆ ಎಂದು ಹೇಳುತ್ತಾರೆ. ಅದರಂತೆ ಈ ವಿಡಿಯೋದಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನೆ ಎಂದು ಮುಂದೆ ಓದಿ..
ಕತ್ತಲು ಮತ್ತು ನಿರ್ಜನ ರಸ್ತೆಯಲ್ಲಿ ಮೂವರು ಬೈಕ್ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಸ್ತೆಯ ಬದಿಯಲ್ಲಿ ಬಿಳಿ ಬಟ್ಟೆಯಲ್ಲಿದ್ದ ವ್ಯಕ್ತಿ ಇರುವುದನ್ನು ಗಮನಿಸಿ ಚಿತ್ರೀಕರಣ ಮಾಡಲು ಪ್ರಾರಂಭಿಸುತ್ತಾರೆ. ಬೈಕ್ ಸವಾರ ನಿಧಾನವಾಗಿ ಮುಂದೆ ಸಾಗುತ್ತಿದ್ದಂತೆ ಅದು ದೆವ್ವವೆಂದು ಗಾಬರಿ ಬೀಳುತ್ತಾರೆ.
ನಂತರ ಆ ಮೂವರು ರಸ್ತೆಯ ಮಧ್ಯದಲ್ಲಿ ಬಿಳಿ ಸಾರಿ ಉಟ್ಟು, ಕೂದಲು ಬಿಚ್ಚಿಕೊಂಡ ಆಕಾರ ಗಮನಿಸಿ ತಬ್ಬಿಬ್ಬಾಗುತ್ತಾರೆ. ಹಿಂದಿದ್ದ ಇಬ್ಬರು ಗೆಳೆಯರು ಬೈಕ್ನಿಂದ ಇಳಿದು ಭಯಗೊಳಿಸಿದ್ದರಿಂದ ಚಾಲಕ ಮತ್ತಷ್ಟು ತಬ್ಬಿಬ್ಬಾಗುತ್ತಾನೆ. ರಪಕ್ಕನೆ ಯೂಟರ್ನ್ ತೆಗೆದು ಬೈಕ್ ನಲ್ಲಿ ಹೋಗೋದನ್ನು ಗಮನಿಸಬಹುದು.
ಆದರೆ, ಈ ವೀಡಿಯೋವನ್ನು ತಮಾಷೆಯಾಗಿ ಮಾಡಿದ್ದು, ಒಟ್ಟಾರೆ ನೋಡುಗರನ್ನು ಭಯಪಡಿಸುವ ಇವರ ಪ್ರಯತ್ನ ಯಶಸ್ವಿಯಾಗಿದೆ. ಭಯದ ಕಣ್ಣುಗಳಿಂದಲೇ ವೀಡಿಯೋ ವೀಕ್ಷಿಸುತ್ತಿದ್ದ ನೆಟ್ಟಿಗರು ಕೊನೆಗೆ ಮಾತ್ರ ಬಿದ್ದು ಬಿದ್ದು ನಕ್ಕಿದ್ದಾರೆ. ಇದಕ್ಕೆ ಕಾಮೆಂಟ್ ಗಳ ಸಾಲೆ ಹರಿದುಬಂದಿದ್ದು, ಎಲ್ಲರ ಮನ ಗೆದ್ದಿದೆ.