ನಕಲಿ ಹಣ ಕದಿಯುವ ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲೂ ಇದ್ದರೆ ತಕ್ಷಣ ಡಿಲೀಟ್ ಮಾಡಿ!

ಗೂಗಲ್ ತನ್ನ ಬಳಕೆದಾದರಿಗೆ ಯಾವುದೇ ತೊಂದರೆ ಉಂಟಾಗದಂತೆ ಫೇಕ್ ಆಪ್ ಗಳನ್ನು ತೆಗೆದುಹಾಕಿದರೂ, ಮತ್ತೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗೂಗಲ್ ಫೇಕ್ ಆಪ್ ಗಳನ್ನು ಡಿಲೀಟ್ ಮಾಡಲು ಸೂಚಿಸಿದೆ.

ವಾರಗಳ ಹಿಂದೆಯಷ್ಟೆ ಗೂಗಲ್ ತನ್ನ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿದ್ದ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಮತ್ತೆ ಪ್ಲೇ ಸ್ಟೋರ್​ನಲ್ಲಿ ಫೇಕ್ ಆಯಪ್ ಪತ್ತೆಯಾಗಿದೆ. ಸೆಕ್ಯುರಿಟಿ ರಿಸರ್ಚ್ ಕಂಪನಿ ಟ್ರೆಂಡ್ ಮೈಕ್ರೊ ಈ ಬಗ್ಗೆ ಮಾಹಿತಿ ತಿಳಿಸಿದ್ದು, ಪ್ಲೇ ಸ್ಟೋರ್​ನಲ್ಲಿರುವ ಈ ನಕಲಿ ಆಪ್​ಗಳನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ ಎಂದು ಹೇಳಿದೆ.

ಇದು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುತ್ತದೆ. ಅಲ್ಲದೆ ನಿಮ್ಮ ಬ್ಯಾಂಕ್​ಗೆ ಸಂಬಂಧಿಸಿದ ಪಿನ್ ನಂಬರ್, ಪಾಸ್ವರ್ಡ್ ಜೊತೆಗೆ ಅನೇಕ ಮಾಹಿತಿಯನ್ನು ಕಲೆಹಾಕುತ್ತದೆ ಎಂದು ಹೇಳಿದೆ. ಗೂಗಲ್ ಪ್ಲೇ ಸ್ಟೋರ್‌ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆಪ್‌, ಪ್ರತಿ ಬಾರಿ ಹಣ ದೋಚುವ ಆಪ್‌ಗಳನ್ನು ಗೂಗಲ್ ಕಿತ್ತುಹಾಕುತ್ತಿದೆ. ಸದ್ಯ ಈ ಆಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ ಎಂದು ಫೇಕ್ ಆಪ್ ಗಳ ಮಾಹಿತಿಯನ್ನು ನೀಡಿದೆ.

Call Recorder APK (com.caduta.aisevsk)

Rooster VPN (com.vpntool.androidweb)

Super Cleaner- hyper & smart (com.j2ca.callrecorder)

Document Scanner – PDF Creator (com.codeword.docscann)

Universal Saver Pro (com.virtualapps.universalsaver)

Eagle photo editor (com.techmediapro.photoediting)

Call recorder pro+ (com.chestudio.callrecorder)

Extra Cleaner (com.casualplay.leadbro)

Crypto Utils (com.utilsmycrypto.mainer)

FixCleaner (com.cleaner.fixgate)

Just In: Video Motion (com.olivia.openpuremind)

com.myunique.sequencestore

com.flowmysequto.yamer

com.qaz.universalsaver

Lucky Cleaner (com.luckyg.cleaner)

Simpli Cleaner (com.scando.qukscanner)

Unicc QR Scanner (com.qrdscannerratedx)

1 Comment
  1. MichaelLiemo says

    ventolin cost uk: Buy Albuterol for nebulizer online – ventolin tablet
    cheap ventolin generic usa

Leave A Reply

Your email address will not be published.