ಶಾಲೆಯಲ್ಲಿ ಮಗುವಿನ ಕೈಯಿಂದ ಮಸಾಜ್ ಮಾಡಿಸಿದ ಶಿಕ್ಷಕಿ | ವೀಡಿಯೋ ವೈರಲ್

ಶಾಲಾ ಶಿಕ್ಷಕಿಯೊಬ್ಬರು ಶಾಲಾ ಮಗುವಿನ ಕೈಯಿಂದ ಶಾಲಾ ಕೊಠಡಿಯೊಳಗೆ ಮಸಾಜ್ ಮಾಡಿಸಿದ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ತರಗತಿ ಕೊಠಡಿಯೊಳಗೆ ಮಕ್ಕಳಿಗೆ ಸೇವೆ ಮಾಡಿಸಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಿದೆ.

 

ಈ ವೈರಲ್ ವೀಡಿಯೊದಲ್ಲಿ ಶಿಕ್ಷಕಿ ಊರ್ಮಿಳಾ ಸಿಂಗ್ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬವಾನ್ ಬ್ಲಾಕ್‌ನ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತರಗತಿಯ ವಿದ್ಯಾರ್ಥಿಯೊಬ್ಬನಿಂದ ತನ್ನ ಕೈಗಳಿಗೆ ಮಸಾಜ್ ಮಾಡಿಸಿಕೊಂಡಿರುವ ವೀಡಿಯೊ ವೈರಲ್ ಆದ ಬಳಿಕ ಬಿಎಸ್ಎ ಶಿಕ್ಷಕಿಯನ್ನು ಈಗ ಅಮಾನತು ಮಾಡಲಾಗಿದೆ. ಈ ಶಿಕ್ಷಕಿ ಮಕ್ಕಳೊಂದಿಗೆ ಮಾಡಿದ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿಕ್ಷಣಾಧಿಕಾರಿಯವರೆಗೆ ಈ ವೀಡಿಯೋ ತಲುಪಿದ್ದು, ಈ ಶಿಕ್ಷಕಿಯ ಅಸಮರ್ಪಕ ನಡವಳಿಕೆ ಮತ್ತು ಅವ್ಯವಹಾರದ ಬಗ್ಗೆ ಬಿಇಒಗೆ ದೂರು ನೀಡಿದ್ದರು. ಇದೇ ವೇಳೆ ವೀಡಿಯೊ ಭಾರಿ ವೈರಲ್ ಆದ ಕಾರಣ ಬಿಇಒ ತಕ್ಷಣವೇ ಜಾರಿಗೆ ಬರುವಂತೆ ಮೇಡಂ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.

34 ಸೆಕೆಂಡುಗಳ ಈ ವೀಡಿಯೊ ವೈರಲ್ ಆಗಿದ್ದು, ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ನಿಯುಕ್ತಿ ಮಾಡಲಾದ ಸಹಾಯಕ ಶಿಕ್ಷಕಿ ಊರ್ಮಿಳಾ ಸಿಂಗ್ ಮಗುವಿಗೆ ಕೈಯಿಂದ ತನ್ನ ಕೈಗಳಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ. ಮಸಾಜ್ ಮಾಡಿಸಿಕೊಂಡ ಕಾರಣ ಆಕೆಯ ಮೇಲೆ ದೂರು ದಾಖಲಿಸಲಾಗಿದೆ. ಶಿಕ್ಷಕಿ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ತಿಳಿಸದೆ ರಜೆಯಲ್ಲಿದ್ದಾರೆ ಎಂದು ಪ್ರಾಂಶುಪಾಲರು ಬಿಇಒಗೆ ನೀಡಿದ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಇದಲ್ಲದೆ ಶಿಕ್ಷಕಿಯನ್ನು ಮನೋವೈದ್ಯರ ಬಳಿ ಪರೀಕ್ಷೆ ಮಾಡಿಸುವ ಅಗತ್ಯವನ್ನೂ ಸಹ ಅವರು ತಿಳಿಸಿದ್ದರು.

ಮಸಾಜ್ ಮಾಡಿಸಿದ ವೀಡಿಯೋ ಈ ಕೆಳಗೆ ನೀಡಲಾಗಿದೆ

Leave A Reply

Your email address will not be published.