ಪಾರ್ಕ್ ಗೆ ಬಂದ ಜೋಡಿಯೊಂದು ಮಾಡಿದ್ದಾದರೂ ಏನು ? ವೈರಲ್ ಆದ ಈ ಜೋಡಿಯ ವೀಡಿಯೋ ನೋಡಿದರೆ ಖಂಡಿತಾ ಬಿದ್ದು ಬಿದ್ದು ನಗುತ್ತೀರ…
ಪ್ರೀತಿಸುವವರು ತಿರುಗಾಡೋಕೆ ಹೋಗೋದು ಮಾಮೂಲಿ. ಹೆಚ್ಚೆಂದರೆ ಎಲ್ಲಿಗೆ ಹೋಗಬಹುದು ಪಾರ್ಕ್, ಸಿನಿಮಾ ಅಷ್ಟೇ ತಾನೆ. ಒಟ್ಟಿಗೆ ಸಮಯ ಕಳೆಯಲು ಕಪಲ್ಸ್ ಗಳು ಹಾತೊರೆಯುತ್ತಿರುವುದರಿಂದ ಎಲ್ಲಾದರೂ ಒಂದು ಕಡೆ ಹೋಗಿ ಹಾಯಾಗಿ ಟೈಂ ಪಾಸ್ ಮಾಡುತ್ತಾ ಸಮಯ ಕಳೆಯೋದನ್ನು ನೀವು ನೋಡಿರಬಹುದು. ಹೆಚ್ಚಾಗಿ ಪ್ರೇಮಿಗಳು ಆಯ್ಕೆ ಮಾಡುವ ಜಾಗ ಪಾರ್ಕ್. ತಾವು ಪ್ರೀತಿಸುವ ಹುಡುಗ ಅಥವಾ ಹುಡುಗಿಯನ್ನು ನೋಡಬೇಕು, ಮಾತನಾಡಬೇಕು ಎಂಬ ಹಂಬಲ ಈ ಜೋಡಿಗಳಿಗಿರುತ್ತವೆ.
ಪಾರ್ಕ್ ನಲ್ಲಿ ಯಾರೇ ಒಳಹೊಕ್ಕರೂ ನಿಮಗೆ ಒಂದಾದರೂ ಜೋಡಿ ಕಾಣಿಸದೆ ಇರದು. ನಾವು ಯಾಕೆ ಈಗ ಈ ವಿಷಯ ತೆಗೆದೆವು ಅಂದರೆ, ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಇಂಥ ಜೋಡಿಯೊಂದರ ವೀಡಿಯೋವೊಂದು ವೈರಲ್ ಆಗುತ್ತಿದೆ. ಏಕೆಂದರೆ ಈ ಜೋಡಿ ಯಾಕೆ ಪಾರ್ಕ್ ಗೆ ಬಂದಿದೆ. ಬಂದು ಮಾಡುತ್ತಿರುವುದಾದರೂ ಏನು ? ಇವರು ಮಾಡಿದ ಯಾವ ಕೆಲಸ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ? ಬನ್ನಿ ತಿಳಿಯೋಣ.
ಈ ವೀಡಿಯೋದಲ್ಲಿ ಕಾಣಿಸಿರೋ ಪ್ರಕಾರ, ನದಿ ದಡದಲ್ಲಿ ಜೋಡಿಯೊಂದು ಕುಳಿತಿರುವುದು ಕಾಣಿಸುತ್ತದೆ. ಹುಡುಗಿ ನದಿ ತೀರದ ಸುಂದರ ದೃಶ್ಯಗಳನ್ನು ನೋಡುತ್ತಿದ್ದರೆ, ಈ ಪ್ರಿಯಕರ ಮಾತ್ರ ತನ್ನ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿರುವುದನ್ನು ಕಾಣಬಹುದು. ಹೇನು ಹುಡುಕಿ ಅದನ್ನು ಹೆಕ್ಕಿ ತೋರಿಸುತ್ತಿದ್ದಾನೆ. ಕೆಲವೇ ಸೆಕೆಂಡುಗಳ ಈ ವೀಡಿಯೋವನ್ನು ನೋಡಿ ಎಂಥವರಿಗೂ ನಗು ಬಾರದೇ ಇರದು.
ಡೇಟಿಂಗ್ ಗೆ ಬಂದ ಪ್ರೇಮಿಗಳು ಈ ರೀತಿ ನದಿ ದಡದಲ್ಲಿ ಕುಳಿತು ಹೇನು ಹುಡುಕುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ಪೋಸ್ಟ್ ಆಗುತಿದ್ದಂತೆಯೇ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ಈ ರೀತಿಯ ತಮಾಷೆಯ ವೀಡಿಯೊಗಳು ಕಂಡುಬರುತ್ತಿವೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋ ನೆಟ್ಟಿಗರು ಕೂಡ ತುಂಬಾ ಇಷ್ಟಪಟ್ಟಿದ್ದಾರೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ :