15 ರ ಪೋರನೊಂದಿಗೆ ನಾಲ್ಕು ಮಕ್ಕಳ ತಾಯಿ ಎಸ್ಕೇಪ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ | ತಂದೆ ತಾಯಿಯ ನೆನಪು ಕಾಡಿದ ಬಾಲಕ ಮಾಡಿದ್ದೇನು ಗೊತ್ತೇ?

ಇತ್ತೀಚೆಗೆ ವರದಿಯೊಂದು ಬಂದಿತ್ತು. ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿರುವ ಮಹಿಳೆಯೋರ್ವಳು 15 ರ ಪೋರನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದು. ಈಗ ಆಕೆ ಮತ್ತು ಬಾಲಕ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಆಕೆಗೆ ಮದುವೆಯಾಗಿ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ.
ಆದರೆ, ಈಕೆಗೆ ಈ 14 ವರ್ಷದ ಬಾಲಕನ ಮೇಲೆ ಮೋಹ ಉಂಟಾಗಿದೆ. ನಂತರ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹೈದರಾಬಾದ್‌ನಲ್ಲಿ ಬಾಲಕನನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದ ಬಾಲಕ ಮತ್ತು ಈತನ ಎದುರುಗಡೆ ಮನೆಯಲ್ಲಿ ವಾಸವಾಗಿದ್ದ 30 ವರ್ಷದ ಮಹಿಳೆ ಜುಲೈ 19ರಿಂದ ಕಾಣುತ್ತಿಲ್ಲ ಎಂದು ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಅಘಾತಕಾರಿಗಳು ಅಂಶಗಳು ಬೆಳಕಿಗೆ ಬಂದಿವೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಈ ಮಹಿಳೆಯ ಗಂಡನಿಗೆ ಅನಾರೋಗ್ಯ ಕಾಡುತ್ತಿತ್ತು. ಹಾಗಾಗಿ ಜೊತೆಗೆ ವಾಸವಾಗಿಲ್ವಂತೆ. ಈಕೆ ಸಮಯ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ಸಲುಗೆಯಿಂದ ಆಟವಾಡುತ್ತಿದ್ದು, ನಂತರ ಆ ಬಾಲಕನನ್ನು ತನ್ನತ್ತ ಸೆಳೆದಿದ್ದಾಳೆ. ಅದೇನು ಜಾದೂ ಮಾಡಿದಳೋ ಈ ಮಹಿಳೆಯ ಆಕರ್ಷಣೆಗೆ ಬಾಲಕ ಸಿಲುಕಿಕೊಂಡಿದ್ದಾನೆ. ಅಲ್ಲದೇ, ಪೋರ್ನ್ ವೀಡಿಯೋಗಳನ್ನು ತೋರಿಸುವ ಆಮಿಷವೊಡ್ಡಿ, ಬಾಲಕನೊಂದಿಗೆ ಕಳೆದ ಒಂದು ತಿಂಗಳಿನಿಂದ ದೈಹಿಕ ಸಂಪರ್ಕ ಹೊಂದಿದ್ದಾಳೆ ಎಂದು ಹೇಳಲಾಗಿದೆ.

ಅಷ್ಟು ಮಾತ್ರವಲ್ಲದೇ ಈ ಎಂಟನೇ ತರಗತಿ ಓದುತ್ತಿದ್ದ ಬಾಲಕ ಈ ಮಹಿಳೆಯ ಆಕರ್ಷಣೆಗೊಳಗಿದ್ದ ಕಾರಣ ಸರಿಯಾಗಿ ಶಾಲೆಗೆ ಕೂಡಾ ಹೋಗುತ್ತಿರಲಿಲ್ಲ. ಆ ಬಾಲಕನ ಮನೆಗೆ ಈ ಮಹಿಳೆ ನಿರಂತರವಾಗಿ ಹೋಗುತ್ತಿದ್ದಳಂತೆ. ಈಕೆಯ ನಡವಳಿಕೆಯಿಂದ ಸಂಶಯಗೊಂಡ ಆ ಬಾಲಕನ ಪೋಷಕರು ಮಹಿಳೆಗೆ ಗದರಿಸಿದ್ದಾರೆ. ಈ ವಿಷಯವನ್ನು ಮಹಿಳೆಗೆ ಬಾಲಕ ತಿಳಿಸಿದ್ದಾನೆ. ಹೀಗಾಗಿ ತನ್ನ ಸಂಬಂಧದ ಬಗ್ಗೆ ಯಾರಿಗಾದರೂ ಅನುಮಾನ ಬರಬಹುದು ಮತ್ತು ಬಾಲಕ ತನ್ನಿಂದ ದೂರವಾಗಬಹುದು ಎಂದು ಬಾಲಕನನ್ನು ಗುಡಿವಾಡದಿಂದ ಕರೆದುಕೊಂಡು ಹೈದರಾಬಾದ್‌ಗೆ ಬಂದಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಹೈದರಾಬಾದ್‌ಗೆ ಬಾಲಕನನ್ನು ಕರೆದುಕೊಂಡು ಬಂದಿದ್ದ ಈ ಮಹಿಳೆ, ಇಲ್ಲಿನ ಬಾಲನಗರದಲ್ಲಿ ಮನೆ ಬಾಡಿಗೆ ಪಡೆದು ಬಾಲಕನೊಂದಿಗೆ ಸಹಜೀವನ ಮಾಡಲು ಆರಂಭಿಸಿದ್ದಾಳೆ. ಆದರೆ ಈ ಬಾಲಕನಿಗೆ ಸ್ವಲ್ಪ ದಿನದಲ್ಲಿ ಅಪ್ಪ ಅಮ್ಮ ನೆನಪು ಕಾಡಿರಬೇಕು. ಆದರೆ ಊರಿಗೆ ಹೋಗಲು ಈತನ ಬಳಿ ಹಣವಿರಲಿಲ್ಲ. ಹಾಗಾಗಿ ಊರಿನಲ್ಲಿದ್ದ ಪರಿಚಯಸ್ಥರಿಗೆ ಹಣ ಬೇಕೆಂದು ಮೆಸೇಜ್ ಮಾಡಿದ್ದಾನೆ. ಆದರೆ, ಅವರು ಸ್ಪಂದಿಸದೇ ಇದ್ದಾಗ ತಂದೆ-ತಾಯಿಗೆ ಫೋನ್ ಮಾಡಿದ್ದಾನೆ. ಹಾಗೂ ತಾನು ಹೈದರಾಬಾದ್‌ನಲ್ಲಿ ಇರುವುದಾಗಿ ಹೇಳಿದ್ದಾನೆ.

ಕೂಡಲೇ ಕಾರ್ಯಪ್ರವೃತ್ತರಾದ ಪೋಷಕರು ಪೊಲೀಸರಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ಅನಂತರ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಪೊಲೀಸರು ಮಂಗಳವಾರ ರಾತ್ರಿ ಹೈದರಾಬಾದ್‌ಗೆ ಬಂದಿದ್ದು, ಬಾಲಕ ಮತ್ತು ಮಹಿಳೆಯನ್ನು ಪತ್ತೆ ಹಚ್ಚಿ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಲಕನನ್ನು ಬುಧವಾರ ಬೆಳಗ್ಗೆ ಗುಡಿವಾಡಕ್ಕೆ ಕರೆದುಕೊಂಡು ಹೋದ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ನಂತರ ಕೌನ್ಸಿಲಿಂಗ್ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಆರೋಪಿಯಾಗಿರುವ ಮಹಿಳೆಯನ್ನು ಅಪಹರಣ ಮತ್ತು ಪೋಕ್ಸ್ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Leave A Reply

Your email address will not be published.