ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಅಮಾಯಕ ಕನ್ಹಯ್ಯ ಹತ್ಯೆಗೆ ಹೋಲಿಸಿ ಖಂಡಿಸಿದ ಶಾಸಕ ಸಂಜೀವ ಮಠಂದೂರು | ‘ಯೋಗಿ ಮಾಡೆಲ್ ಬಳಕೆ ಖಚಿತ ಎಂದ ಶಾಸಕ ‘, ಮುಖ್ಯಮಂತ್ರಿ ಟ್ವೀಟ್ !

ನಿನ್ನೆ ರಾತ್ರಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯ ಪ್ರಕರಣವನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಹೊಸ ಕನ್ನಡದ ಜೊತೆ ಮಾತನಾಡಿದ ಪುತ್ತೂರು ಶಾಸಕ ಶ್ರೀ ಸಂಜೀವ ಮಠ0ದೂರು ಅವರು ಘಟನೆಯನ್ನು ಕನ್ನಯ್ಯ ಹತ್ಯಪ್ರಕರಣಕ್ಕೆ ಹೋಲಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲೂ ಸಾಮ್ಯತೆ ಇರುವುದನ್ನು ಸಂಜೀವ ಮಠ0ದೂರು ಅವರು ಗುರುತಿಸಿದ್ದಾರೆ. ಹಾಗಾದರೆ ಘಟನೆಯಲ್ಲಿ ಅಂತಹ ಸಾಮ್ಯತೆ ಏನು ?

ಯೋಗಿ ಮಾಡೆಲ್ ನಲ್ಲಿ ಅಸ್ತ್ರ ಪ್ರಯೋಗ ಖಚಿತ ಎಂದ ಪುತ್ತೂರಿನ ಶಾಸಕ ಸಂಜೀವ ಮಠಂದೂರು


Ad Widget

Ad Widget

Ad Widget

Ad Widget

Ad Widget

Ad Widget

Ad Widget

“ಕನ್ನಯ್ಯ ಲಾಲ್ ರಂತೆ ನಿನ್ನೆ ಕೊಲೆಯಾದ ಪ್ರವೀಣ್ ನೆಟ್ಟಾರ್ ಅವರು ಅಮಾಯಕರಾಗಿದ್ದು, ಮುಸ್ಲಿಂ ಮೂಲಭೂತವಾದಿಗಳು ಕೇವಲ ಸಮಾಜದಲ್ಲಿ ಭಯವನ್ನು ಮತ್ತು ಕ್ರೌರ್ಯವನ್ನು ತೋರಿಸುವ ಸಲುವಾಗಿ ನಿನ್ನೆ ಪ್ರವೀಣ್ ನೇತಾರ್ ಎನ್ನುವ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯನ್ನು ಹತ್ಯೆ ಮಾಡಿದ್ದಾರೆ. ಇಲ್ಲಿಯತನಕ ಹಿಂದೂ ನಾಯಕರುಗಳ ಮೇಲೆ ಹಿಂದೂ ಕಾರ್ಯಕರ್ತರಗಳ ಮೇಲೆ ಹಲ್ಲೆ ನಡೆಯುತ್ತಿತ್ತು. ಇದೀಗ ನಮ್ಮ ರಾಜ್ಯದಲ್ಲೂ ಬಿಜೆಪಿ ಪದಾಧಿಕಾರಿಯೊಬ್ಬರ ಹತ್ಯೆ ನಡೆದಿದೆ.
ಘಟನೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದು ಈ ಬಗ್ಗೆ ಗೃಹ ಸಚಿವರ ಮತ್ತು ಮುಖ್ಯಮಂತ್ರಿಗಳ ಜೊತೆ ನೇರವಾಗಿ ಮಾತುಕತೆ ನಡೆಸಲಿದ್ದೇನೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಸಂವಾದ ನಡೆಯುತ್ತಿದೆ. ಇಂತಹ ಅಪರಾಧ ನಡೆಸಿದವರ ಮೇಲೆ ಯೋಗಿ ಮಾಡೆಲ್ ನಲ್ಲಿ ಅಸ್ತ್ರ ಪ್ರಯೋಗ ಖಚಿತ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರುರವರು ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ.”

ಕನ್ನಯ್ಯ ಹತ್ಯೆ ಪ್ರಕರಣವನ್ನು ಎಂಐ ತನಿಖೆಗೆ ಕೈಗೆತ್ತಿಕೊಂಡು ಅಪರಾಧಿಗಳನ್ನು ಹಿಡಿಯುವುದು ಅಲ್ಲದೆ, ಸಮಗ್ರ ತನಿಖೆ ನಡೆಸುತ್ತಿರುವಂತೆ ಪ್ರವೀಣ್ ನೆಟ್ಟಾರು ಅವರ ಹತ್ಯ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಇಲ್ಲದೆ ಹೋದರೆ ಈ ಮೂಲಭೂತ ವಾದಿಗಳು ಇನ್ನೆಷ್ಟು ಅಮಾಯಕರನ್ನು ಬಲಿಪಡಿಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ, ಮೃತರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ, ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಇದ್ದ ಪುತ್ತೂರು ಶಾಸಕ ಸಂಜೀವ ಮಠ೦ದೂರು ಗೃಹಸಚಿವರಿಗೆ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ವಿಷಯವನ್ನು ತಂದಿದ್ದರು. ಅದರಂತೆ ಸರ್ಕಾರದ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಮ್ಮ ತಂಡಕ್ಕೆ ಅಗತ್ಯ ಸೂಚನೆಯನ್ನು ನೀಡಿದ್ದರು.

ಘಟನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಖಂಡಿಸಿದ್ದಾರೆ. ಈ ಹೇಯಕೃತ್ಯ ಎಸಗಿದ ಅಪರಾಧಿಗಳನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು, ಮೃತರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ಆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉಳಿದಂತೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹತ್ಯೆಯನ್ನು ಖಂಡಿಸಿದ್ದಾರೆ.

ಮುಸ್ಲಿಂ ಮೂಲಭೂತವಾದಿಗಳು ರಾಜ್ಯದಲ್ಲಿ ಕೂಡಾ ಭಯದ ವಾತಾವರಣವನ್ನು ಉಂಟುಮಾಡಲು ಪ್ರಯತ್ನಿಸುತ್ತಿರುವುದು ನಿನ್ನೆಯ ಘಟನೆಯಿಂದ ಸಾಬೀತಾದಂತಿದೆ. ಕಾರಣ, ತನ್ನ ಪಾಡಿಗೆ ಸಾಮಾಜಿಕ ಮತ್ತು ಬಿಜೆಪಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯುವಕನನ್ನು ನಿನ್ನೆ ರಾತ್ರಿ ಕೇರಳದ ರಿಜಿಸ್ಟ್ರೇಷನ್ ಉಳ್ಳ ಬೈಕಿನಲ್ಲಿ ಬಂದ ಆಗಂತುಕರು ತಳವಾರ್ ಬೀಸಿ ಹತ್ಯೆಮಾಡಿದ್ದರು. ಇಲ್ಲೂ ಕೂಡಾ ಹತ್ಯೆ ಆರೋಪಿಗಳು ತಲೆಗೇ ಅಟ್ಯಾಕ್ ಮಾಡಿದ್ದರು. ಅವತ್ತು ಕನ್ನಯ್ಯ ಹತ್ಯಾ ಮಾದರಿಯಲ್ಲೇ, ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಅಮಾಯಕನ ಕೊಲೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಅವರ ಉದ್ದೇಶ ಇದ್ದಂತಿದೆ. ಕನ್ನಯ್ಯ ಅವರ ತಲೆ ಕಡಿದಂತೆ ನಿನ್ನೆಯ ಪ್ರವೀಣ್ ಹತ್ಯಾ ಪ್ರಕರಣದಲ್ಲೂ ಹಂತಕರು ತಲೆಯನ್ನೇ ಗುರಿಯಾಗಿಸಿದ್ದರು ಎಂಬ ಸ್ಪೋಟಕ ಅಂಶ ಈಗ ಬಲ್ಲ ಮೂಲಗಳಿಂದ ಅರಿವಿಗೆ ಬರುತ್ತಿದೆ.ಕಾರಣ ಹೆಚ್ಚಿನ ಮಾರಣಾಂತಿಕ ಪೆಟ್ಟುಗಳು ತಲೆಗೇ ಆಗಿತ್ತು ಎನ್ನುವುದು ವಿಶೇಷವಾಗಿ ಗಮನಿಸಬೇಕಾದ ಅಂಶ. ಹೆಚ್ಚಿನ ಮಾಹಿತಿ ತನಿಖೆಯಿಂದ ಬಯಲಾಗಬೇಕಿದೆ.

error: Content is protected !!
Scroll to Top
%d bloggers like this: