ಹತ್ಯೆ ಹಿಂದಿನ ಎಲ್ಲಾ ಪಿತೂರಿಗಳ ಬಗ್ಗೆ ತನಿಖೆ : ಸಂಸದ ನಳಿನ್ ಕುಮಾರ್
ಮಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರವೀಣ್ ನೆಟ್ಟಾರೆ ಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಮತೀಯ ಶಕ್ತಿಗಳು ಶಿವಮೊಗ್ಗ ಹರ್ಷ ಕೊಲೆ, ಡಿಜೆ ಹಳ್ಳಿ. ಕೆಜೆ ಹಳ್ಳಿ ಗಲಭೆ, ಕಾರ್ಯಕರ್ತನ್ನು ಕೊಲೆ ಮಾಡುವ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುಲು ಯತ್ನಿಸುತ್ತಿವೆ.
ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಉತ್ತರ ನೀಡಲಿದೆ. ಇಂಥ ಮತಾಂಧ ಶಕ್ತಿಗಳನ್ನು ಮಣಿಸುವ ಶಕ್ತಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸೂಕ್ತ ಉತ್ತರ ನೀಡಲು ಬದ್ಧರಿದ್ದೇವೆ. ನಮ್ಮ ನೋವು, ಭಾವನೆ ಕಾರ್ಯರ್ತರಲ್ಲಿದೆ. ಸೂಕ್ತ ಉತ್ತರ ನೀಡಬೇಕು ಎನ್ನುವ ಜನರ ಆಕ್ರೋಶವೂ ಇದೆ. ನೋವಿನಿಂದ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿಸುತ್ತೇವೆ. ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡುವ ಕೆಲಸ ಸರಕಾರ ಮಾಡುತ್ತದೆ ಎಂದರು. .
ಮುಗ್ಧ ಯುವಕ ಬಲಿಯಾಗಿದ್ದು, ಎಲ್ಲ ಹಂತದ ತನಿಖೆಗಳಾಗಬೇಕು ಇದರ ಹಿಂದೆ ಕೇರಳ ಸಹಿತ ಮತೀಯ ಶಕ್ತಿಗಳ ಕೈವಾಡ ಇರುವ ಮಾಹಿತಿ ಬರುತಿದೆ. ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಪೊಲೀಸರು ಮುಕ್ತ ಸ್ವಾತಂತ್ರ್ಯದಡಿ ತನಿಖೆ ಮಾಡುತ್ತಾರೆ,
ಒಡನಾಡಿಯನ್ನು ಕಳೆದುಕೊಂಡ ದುಃಖ ನಮಗೂ ಇದೆ. ರಾಷ್ಟ್ರಮಾತೆಯ ಆರಾಧನೆಯೇ ಪ್ರಮುಖ ಎಂದು ಭಾವಿಸಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಯುವಮೋರ್ಚಾದ ಸಜ್ಜನ ಕಾರ್ಯಕರ್ತ ತನ್ನ ಯೌವನವನ್ನು ಸಮರ್ಪಿಸಿದ್ದಾನೆ. ಮನೆಯವರಿಗೆ ಕುಟುಂಬಕ್ಕೆ ದುಃಖವನ್ನು ಶಕ್ತಿ ನೀಡಲಿ ಎಂದರು.