ಯಕ್ಷಗಾನ ಪ್ರಿಯರಿಗೆ ಅಸಮಧಾನ ಕ್ಷಮೆ ಕೇಳಿದ ಜೀ ಕನ್ನಡ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6′ ವೇದಿಕೆ ಮೇಲೆ ಕಳೆದ ವಾರ ಯಕ್ಷಗಾನ ಮಾಡಲಾಗಿತ್ತು. ಈ ವೇಳೆ ಯಕ್ಷಗಾನಕ್ಕೆ ಅವಮಾನ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು.
ಕಳೆದ ವಾರದ ಎಪಿಸೋಡ್ನಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನಗಳೂ ಆದವು. ಕ್ಷಮೆ ಯಾಚಿಸಲು ಯಕ್ಷಗಾನ ಪ್ರಿಯರು ಪಟ್ಟು ಹಿಡಿದರು. ಇದಕ್ಕೆ ಜೀ ಕನ್ನಡ ವಾಹಿನಿ ಮಣಿದಿದೆ. ಕ್ಷಮೆ ಕೇಳಿ ಪೋಸ್ಟ್ ಹಾಕಿದೆ.
ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟಿಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ನಾವು ಸ್ವೀಕರಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ’ ಎಂದು ಜೀ ಕನ್ನಡ ಪೋಸ್ಟ್ ಮಾಡಿದೆ.