15 ರ ಪೋರನೊಂದಿಗೆ ಎದುರು ಮನೆಯ ಆಂಟಿ ಎಸ್ಕೇಪ್ | ಎರಡು ಮಕ್ಕಳ ತಾಯಿಗೆ ಬಾಲಕನ ಜೊತೆ ಲವ್ವಿ ಡವ್ವಿ!!!

ಇದು ಇನ್ನೊಂದು ಅನೈತಿಕ ಸಂಬಂಧದ ಘಟನೆ. ಇಲ್ಲಿ
ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು 15 ರ ಹರೆಯದ ಹುಡುಗನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. ಹಾಗಾಗಿ ಈ ಘಟನೆ ಆ ಊರಿನಲ್ಲಿ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

ಓರ್ವ ಮಹಿಳೆ ಗಂಡ ಮಕ್ಕಳಿರುವ ಸಂಸಾರ ಆಕೆಯದು. ಆಕೆಗೆ ಇನ್ನೂ ಮೀಸೆ ಮೂಡದ ಅಪ್ರಾಪ್ತ ಬಾಲಕನ ಮೇಲೆ ಲವ್. ಈ ಘಟನೆ ಬೆಳಕಿಗೆ ಬರಲು ಕಾರಣ ಆ ಅಪ್ರಾಪ್ತ ಬಾಲಕನ ನಾಪತ್ತೆ ಪ್ರಕರಣ ಬಯಲಿಗೆ ಬಂದಾಗ. ಅಲ್ಲಿಯವರೆಗೆ ಗಂಡ ಏನು ಮಾಡುತ್ತಿದ್ದ ಆತನಿಗೆ ಹೆಂಡತಿಯ ಲವ್ವಿ ಡವ್ವಿ ಗೊತ್ತಿರಲಿಲ್ಲವೇ ? ಇದೆಲ್ಲಾ ತನಿಖೆಯ ಮೂಲಕ ತಿಳಿಯಬೇಕಷ್ಟೇ.

ಅದು ಆಂಧ್ರಪ್ರದೇಶದ ಗುಡಿವಾಡ ಪಟ್ಟಣ. ಆ ಊರಿನಲ್ಲಿ ಗುಡ್‌ಮೆನ್ ಪೇಟ ಎಂಬ ಕಾಲೋನಿ ಇದೆ. ಆ ಕಾಲೋನಿಯಿಂದ ಇತ್ತೀಚೆಗೆ 15 ವರ್ಷದ ಬಾಲಕ ನಾಪತ್ತೆಯಾಗಿದ್ದ. ಪೋಷಕರು ಎತ್ತ ಹುಡುಕಾಡಿದರೂ ಆತ ಪತ್ತೆಯಾಗಲಿಲ್ಲ. ಆದರೆ ಕುತೂಹಲಕಾರಿ ಸಂಗತಿಯೆಂದರೆ‌‌ ಈ ಹುಡುಕಾಟದಲ್ಲಿ ಎದುರು ಮನೆಯ ಆಂಟಿ ಸಹ ನಾಪತ್ತೆಯಾಗಿದ್ದಾಳೆಂಬ ಮಾಹಿತಿ ದೊರೆಯುತ್ತದೆ.

ಹೌದು, ಈ ಕುತೂಹಲಕಾರಿ ಬೆಳವಣಿಗೆಯಲ್ಲಿ ಬಾಲಕನ ಮನೆಯ ಎದುರು ವಾಸವಿದ್ದ 29 ವರ್ಷದ ವಿವಾಹಿತ ಯುವ ಮಹಿಳೆ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸಂಗತಿ ಬಹಿರಂಗವಾಗುತ್ತದೆ. ಇದರಿಂದ ಬಾಲಕನ ಪೋಷಕರಿಗೆ ಆತಂಕ ಹೆಚ್ಚಾಗುತ್ತದೆ. ಕೂಡಲೇ ಅವರು ಆಕೆ ತಮ್ಮ ಹುಡುಗನನ್ನು ಕಿಡ್ನಾಪ್ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲು ಮಾಡುತ್ತಾರೆ.

ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು ಹುಡುಗನನ್ನು ದೂರ ಮಾಡಿದ್ದರ ರಹಸ್ಯವನ್ನು ಪತ್ತೆ ಹಚ್ಚಲು ಪೊಲೀಸರು ರೆಡಿಯಾಗುತ್ತಾರೆ. ಅಷ್ಟು ಮಾತ್ರವಲ್ಲದೇ ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗುತ್ತದೆ. ಜನ ಏನೇನೋ ಮಾತನಾಡಲು ಶುರು ಮಾಡುತ್ತಾರೆ.

ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದಾಗ, ಮದುವೆ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಬಾಲಕನ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಬಾಲಕನ ಪೋಷಕರು ಘೋಷಣೆ ಮಾಡಿದ್ದಾರೆ.

Leave A Reply

Your email address will not be published.