ಇಲ್ಲಿದೆ ಬಣ್ಣ ಬದಲಾಯಿಸುವ ಹಕ್ಕಿ | ಯಾಕೆ ಗೊತ್ತೇ?
ನೀವು ಬಣ್ಣ ಬದಲಿಸೋ ಗೋಸುಂಬೆ, ಹಾವನ್ನು ನೋಡಿರ್ತೀರಾ. ಆದ್ರೆ ಬಣ್ಣ ಬದಲಿಸೋ ಹಕ್ಕಿಯನ್ನು ಎಂದಾದ್ರೂ ನೋಡಿದ್ದೀರಾ..? ಇಲ್ಲಿದೆ ನೋಡಿ ಬಣ್ಣ ಬದಲಾಯಿಸುವ ಹಕ್ಕಿ
ತನ್ನ ಸುತ್ತಲೂ ಇರುವ ಬೆಳಕಿನ ಪ್ರಮಾಣವನ್ನು ಅವಲಂಬಿಸಿ ಬಣ್ಣಗಳನ್ನು ಬದಲಾಯಿಸುವ ಪುಟಾಣಿ ಹಕ್ಕಿಯನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ, ಹಕ್ಕಿಯತನ್ನ ಕುತ್ತಿಗೆ ಯನ್ನು ಅತ್ತಿತ್ತ ತಿರುಗಿಸುವಾಗ ಬಣ್ಣ ಬದಲಾಯಿಸಿದೆ. ಈ ವಿಡಿಯೋವನ್ನು ವಂಡರ್ ಆಫ್ ಸೈನ್ಸ್ ನ ಟ್ವಿಟ್ಟರ್ ಪುಟ ಹಂಚಿಕೊಂಡಿದೆ.
ಹಮ್ಮಿಂಗ್ ಪಕ್ಷಿಯ ವಿಡಿಯೋ ಜನರನ್ನು ಆಶ್ಚರ್ಯಕರವಾಗಿಸಿದೆ. ಹಮ್ಮಿಂಗ್‌ಬರ್ಡ್‌ನ ವಿಡಿಯೋವನ್ನು ಹಂಚಿಕೊಳ್ಳುತ್ತಾ “ಅನ್ನಾಸ್ ಹಮ್ಮಿಂಗ್ ಬರ್ಡ್‌ನ ಬೆರಗುಗೊಳಿಸುವ ಬಣ್ಣಗಳು ಅವುಗಳ ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಉಂಟಾಗುವ ವರ್ಣವೈವಿಧ್ಯವಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಅನ್ನಾಸ್ ಹಮ್ಮಿಂಗ್ ಬರ್ಡ್ ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅವುಗಳು ಹೂವುಗಳಿಂದ ಮಕರಂದವನ್ನು ತಿನ್ನುತ್ತವೆ.