SBI ಗ್ರಾಹಕರೇ ನಿಮಗೊಂದು ಮುಖ್ಯವಾದ ಮಾಹಿತಿ | ATM ನಗದು ನಿಯಮದಲ್ಲಿ ಬದಲಾವಣೆ , ಇಲ್ಲಿದೆ ಸಂಪೂರ್ಣ ಮಾಹಿತಿ
ಗ್ರಾಹಕರು ಬ್ಯಾಂಕ್ ಗಳಿಂದ ಕರೆ, ಮೆಸೇಜ್ ಗಳನ್ನು ನಂಬಿ ಮೋಸ ಹೋಗುವುದನ್ನು ತಪ್ಪಿಸಲು ಹಾಗೂ ಗ್ರಾಹಕರನ್ನು ವಂಚನೆಯಿಂದ ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ವಹಿವಾಟಿನಿಂದ ರಕ್ಷಿಸಲು ಪಾಸ್ವರ್ಡ್ (OTP) ಆಧಾರಿತ ನಗದು ಹಿಂಪಡೆಯುವ ಸೇವೆ ಪ್ರಾರಂಭಿಸಿದೆ.
ಇದು ಅನಧಿಕೃತ ವಹಿವಾಟುಗಳ ವಿರುದ್ಧ ರಕ್ಷಣೆಯ ಹೆಚ್ಚುವರಿ ಪದರವಾಗಿ ಕಾರ್ಯನಿರ್ವಹಿಸುತ್ತದೆ.
ಶೀಘ್ರದಲ್ಲೇ ಅನೇಕ ಬ್ಯಾಂಕ್ಗಳು ಎಟಿಎಂಗಳಿಂದ ನಗದು ಹಿಂಪಡೆಯಲು ಈ ವಿಧಾನಕ್ಕೆ ಬದಲಾಗುವ ನಿರೀಕ್ಷೆಯಿದೆ.
ಎಟಿಎಂಗಳಲ್ಲಿ ನಗದು ಹಿಂಪಡೆಯುವ ಸಮಯದಲ್ಲಿ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. OTP ಸಿಸ್ಟಂ-ರಚಿತ ನಾಲ್ಕು-ಅಂಕಿಯ ಸಂಖ್ಯೆಯಾಗಿದ್ದು, ಅದನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. OTP ನಗದು ಹಿಂಪಡೆಯುವಿಕೆಯನ್ನು ದೃಢೀಕರಿಸುತ್ತದೆ ಮತ್ತು ಇದು ಕೇವಲ ಒಂದು ವಹಿವಾಟಿಗೆ ಮಾನ್ಯವಾಗಿರುತ್ತದೆ. ಎಸ್ಬಿಐ ಎಟಿಎಂಗಳಲ್ಲಿ ಒಂದು ವಹಿವಾಟಿನಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಹಿಂಪಡೆಯುವ ಗ್ರಾಹಕರಿಗೆ ವ್ಯವಹಾರವನ್ನು ಪೂರ್ಣಗೊಳಿಸಲು ಒಟಿಪಿ ಅಗತ್ಯವಿದೆ.
ಎಸ್ ಬಿಐ ಕಾಲಕಾಲಕ್ಕೆ ಎಟಿಎಂ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇದು ತನ್ನ ಎಲ್ಲಾ ಗ್ರಾಹಕರಿಗೆ ಈ ಸೇವೆಯನ್ನು ಪಡೆಯುವಂತೆ ಮನವಿ ಮಾಡುತ್ತಿದೆ.
ಒಟಿಪಿ ಬಳಸಿ ಹಣವನ್ನು ಹಿಂಪಡೆಯುವ ರೀತಿ ಹೀಗಿದೆ;
ಗ್ರಾಹಕರು ನಿಮ್ಮ ಡೆಬಿಟ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ಎಸ್ಬಿಐ ಎಟಿಎಂನಲ್ಲಿ ಹಣವನ್ನು ಹಿಂಪಡೆಯುವಾಗ ಹೊಂದಿರಬೇಕು.
ನಂತರ ಡೆಬಿಟ್ ಕಾರ್ಡ್ ಅನ್ನು ಸೇರಿಸಿ ಮತ್ತು ವಿತ್ ಡ್ರಾ ಮೊತ್ತದೊಂದಿಗೆ ಎಟಿಎಂ ಪಿನ್ ಅನ್ನು ನಮೂದಿಸಿದ ನಂತರ, ನಿಮ್ಮಲ್ಲಿ ಒಟಿಪಿ ಕೇಳಲಾಗುತ್ತದೆ
ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಒಟಿಪಿ ಬರುತ್ತದೆ.
ನಂತರ ಫೋನ್ ನಲ್ಲಿ ಬಂದ OTP ಯನ್ನು ATM ನಲ್ಲಿ ನಮೂದಿಸಿ
OTP ಯನ್ನು ನಮೂದಿಸಿದ ನಂತರ ವಹಿವಾಟು ಪೂರ್ಣಗೊಳ್ಳುತ್ತದೆ