ನಿಮಗೆ ತಿಳಿದಿರಲಿ, ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸ
ಕರೋನಾ ಪ್ರಾರಂಭವಾದಾಗಿನಿಂದ ಆರೋಗ್ಯದ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಳ್ಳುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ಅಪರೂಪದ ರೋಗ ಕಾಣಿಸಿಕೊಂಡಿದೆ. ಅದುವೇ ಮಂಕಿಪಾಕ್ಸ್.
ಸುಮಾರು 70 ದೇಶಗಳಿಗೆ ಈ ರೋಗ ಹರಡಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಮಂಕಿಪಾಕ್ಸ್ ಖಾಯಿಲೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ತುಂಬಾ ಇದೆ. ಮಂಕಿಪಾಕ್ಸ್ ನೋಡಲು ಚಿಕನ್ ಪಾಕ್ಸ್ ತರಹನೇ ಇದೆ. ಆದರೂ ಇವೆರಡರ ಮಧ್ಯೆ ಅನೇಕ ವ್ಯತ್ಯಾಸ ಇದೆ. ಹಾಗಾದರೆ ಈ ಚಿಕನ್ ಪಾಕ್ಸ್ ಮತ್ತು ಮಂಕಿಪಾಕ್ಸ್ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಮಂಕಿ ಪಾಕ್ಸ್ ದದ್ದುಗಳು ಮುಖದಲ್ಲಿ ಪ್ರಾರಂಭವಾಗಿ ನಂತರ ಕ್ರಮೇಣ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಆದರೆ, ಚಿಕನ್ ಪಾಕ್ಸ್ ದದ್ದುಗಳು ಎದೆಯ ಹಿಂದೆ ಮತ್ತು ಮುಖದಲ್ಲಿ ಕಾಣಿಸಿಕೊಂಡು ನಂತರ ಕ್ರಮೇಣ ದೇಹದಾದ್ಯಂತ ಹರಡಲು ಪ್ರಾರಂಭವಾಗುತ್ತದೆ.
ಮಂಕಿಪಾಕ್ಸ್ ನಲ್ಲಿ, ಲಿಂಫ್ ನೋಡ್ಸ್ ಸಾಕಷ್ಟು ಉರಿಯೂತವನ್ನು ಕೊಡುತ್ತದೆ. ಆದರೆ, ಚಿಕನ್ ಪಾಕ್ಸ್ ನ ಲಿಂಫ್ ನೋಡ್ಸ್ ಊದಿಕೊಳ್ಳೋದಿಲ್ಲ. ಆದರೆ ಅದು ಮೂರರಿಂದ ಐದು ದಿನ ಹೆಚ್ಚಾಗುತ್ತಾ ಹೋಗಿ, ಕ್ರಮೇಣ ಒಣಗುತ್ತಾ ತುರಿಕೆ ಶುರುವಾಗುತ್ತೆ.
ಮಂಕಿಪಾಕ್ಸ್ ನ ಗುಣವಾಲು ತೆಗೆದುಕೊಳ್ಳುವ ಸಮಯ ಸುಮಾರು 5 ರಿಂದ 21 ದಿನಗಳು. ಆದರೆ, ಚಿಕನ್ ಪಾಕ್ಸ್ ನಲ್ಲಿ 4 ರಿಂದ 7 ದಿನಗಳವರೆಗೆ ಇರುತ್ತದೆ. ಆಹಾರದ ಕಡೆಗೆ ಗಮನ ಹರಿಸಿದರೆ ಈ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.
ಮಂಕಿಪಾಕ್ಸ್ ಹೊಂದಿರುವ ರೋಗಿಗಳು 1 ರಿಂದ 5 ದಿನಗಳ ನಡುವೆ ದೇಹದ ಮೇಲೆ ದದ್ದುಗಳನ್ನು ಹೊಂದುತ್ತಾರೆ. ಚಿಕನ್ ಪಾಕ್ಸ್ ನಲ್ಲಿ ದದ್ದುಗಳು ಮೊದಲು ಕಾಣಿಸಿಕೊಂಡು ನಂತರ ಸುಮಾರು 1 ರಿಂದ 2 ದಿನಗಳ ನಂತರ ವ್ಯಕ್ತಿಗೆ ಜ್ವರ ಬರಲು ಪ್ರಾರಂಭವಾಗುತ್ತದೆ.
ಮಂಕಿಪಾಕ್ಸ್ ವೈರಸ್ ಹಾನಿಗೊಳಗಾದ ಚರ್ಮ, ಉಸಿರಾಟ ಮತ್ತು ಮ್ಯೂಕಸ್ ಮೆಂಬ್ರೇನ್ ಮೂಲಕ ದೇಹವನ್ನು ಪ್ರವೇಶಿಸಿದರೆ, ಚಿಕನ್ ಪಾಕ್ಸ್ ವೈರಸ್ ಮುಖ್ಯವಾಗಿ ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತೆ. ಇದು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ.
ಆರ್ಥೋಪಾಕ್ಸ್ ವೈರಸ್ ನಿಂದಾಗಿ ಮಂಕಿಪಾಕ್ಸ್ ಹರಡುತ್ತದೆ. ಚಿಕನ್ ಪಾಕ್ಸ್ ವೆರಿಸೆಲ್ಲಾ-ಜೋಸ್ಟರ್ ವೈರಸ್ ನಿಂದ ಹರಡುತ್ತೆ. ಇದು ಸಾಂಕ್ರಾಮಿಕ ರೋಗ ಹಾಗೂ ಬೇಗನೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.