ಮಗುವಿನ ಬರುವಿಕೆಗಾಗಿ ಕಾದು ಕೂತಿದ್ದ ಅಪ್ಪ ಮೊದಲೇ ಕಣ್ ಮುಚ್ಚಿದ !!

Share the Article

ಕೆಲವೊಮ್ಮೆ ವಿಧಿ ಯಾವ ರೀತಿಲಿ ಆಟವಾಡಿಸುತ್ತೆ ಎಂಬುದನ್ನು ಊಹಿಸಲು ಅಸಾಧ್ಯವಾಗಿರುತ್ತೆ. ಅದಕ್ಕೆ ಈ ಘಟನೆಯೇ ಉದಾಹರಣೆ. ಪುಟ್ಟ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದ ಅಪ್ಪ, ಮಗು ಜಗತ್ತಿಗೆ ಕಾಲಿಡುವುದಕ್ಕೂ ಮೊದಲೇ ಇಹಲೋಕ ತ್ಯಜಿಸಿದ ಹೃದಯವಿದ್ರಾಯಕ ಘಟನೆ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ.

ಮೃತರು ಪಶ್ಚಿಮ ಮಂಗಾದ್​ ಪೂವತ್ತೂರ್​ ಹೌಸ್​ನ ನಿವಾಸಿ ಬಾಲಕೃಷ್ಣ ಅವರ ಪುತ್ರ ಶರತ್​ (30).

ಭಾನುವಾರ ಮಧ್ಯರಾತ್ರಿ 1.30ರ ವೇಳೆಗೆ ಮೃತ ಶರತ್ ಗೆ ಸ್ನೇಹಿತನೊಬ್ಬ ಕರೆ ಮಾಡಿ, ತನ್ನ ಬೈಕ್​ನಲ್ಲಿ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಹೀಗಾಗಿ, ನೆರವಿಗೆಂದು ಶರತ್​ ತನ್ನ ಇನ್ನೊರ್ವ ಸ್ನೇಹಿತನ ಜೊತೆ ತಕ್ಷಣ ಮನೆಯಿಂದ ಹೊರಡುತ್ತಾನೆ.

ಈ ವೇಳೆ, ಬೈಕ್​ನಲ್ಲಿ ಹೋಗುತ್ತಿದ್ದಾಗ ಕುನ್ನಮ್ಕುಲಂ ಬಳಿ ಬೈಕ್​ ನಿಯಂತ್ರಣ ಕಳೆದುಕೊಂಡು ಎದುರುಗಡೆ ಇದ್ದ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಗಂಭೀರ ಗಾಯಗೊಂಡಿದ್ದ ಶರತ್​ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ. ಆತನ ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇತ್ತ, ಶರತ್​ ಮದುವೆಯಾಗಿ ಐದು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ ನಮಿತಾರನ್ನು ಡೆಲಿವರಿಗಾಗಿ ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇವರ ಜೀವನದಲ್ಲಿ ವಿಧಿ ಬೇರೇನೇ ರೀತಿ ಆಟವಾಡಿದ್ದು, ನಮಿತಾ ಸೋಮವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಆದರೆ, ಗಂಡನ ಬರುವಿಕೆಯನ್ನು ಕಾಯುತ್ತಿದ್ದ ಆಕೆಗೆ ನಿರಾಸೆಯೇ ಆಗಿದೆ. ಮಗು ಜಗತ್ತಿಗೆ ಕಾಲಿಡುವ ಮುಂಚೆಯೇ ಅಪ್ಪ ಇಹಲೋಕ ತ್ಯಜಿಸಿದ್ದಾನೆ. ಇತ್ತ ಹೆಂಡತಿಯದವಳು ಮಗುವಿನ ಜನನಕ್ಕೆ ಖುಷಿ ಪಟ್ಟುಕೊಳ್ಳುವುದಾ?, ಅತ್ತ, ಗಂಡ ಮೃತಪಟ್ಟನೆಂದು ಅಳುವುದ ಎಂಬ ಸಂಕಟದಲ್ಲಿ ಮೌನಕ್ಕೆ ಜಾರಿದ್ದಾರೆ..

Leave A Reply