UPSC recruitment | ಅರ್ಜಿ ಸಲ್ಲಿಸಲು ಕೊನೆ ದಿನಾಂಕ 11 ಆಗಸ್ಟ್
ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗಾಗಿ, ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತಾಂತ್ರಿಕ ಸಲಹೆಗಾರ ಹಾಗೂ ರೀಡರ್ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 11 ಆಗಿದೆ.
ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
ಹುದ್ದೆಗಳ ಸಂಖ್ಯೆ: 16
ಉದ್ಯೋಗ ಸ್ಥಳ: ನವದೆಹಲಿ – ನಾಗ್ಪುರ – ಚಂಡೀಗಢ – ಅಖಿಲ ಭಾರತ
ಹುದ್ದೆಯ ಹೆಸರು: ತಾಂತ್ರಿಕ ಸಲಹೆಗಾರ, ರೀಡರ್
ಸಂಬಳ: UPSC ನಿಯಮಗಳ ಪ್ರಕಾರ
ಹುದ್ದೆ, ಹದ್ದೆ ಸಂಖ್ಯೆ , ವಿದ್ಯಾರ್ಹತೆ, ವಯೋಮಿತಿ:
ತಾಂತ್ರಿಕ ಸಲಹೆಗಾರ, 1, ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ, 50 ವರ್ಷ
ಸಹಾಯಕ ನಿರ್ದೇಶಕ, 11, ಪದವಿ,35 ವರ್ಷ
ಸಹಾಯಕ ಮಳಿಗೆ ಅಧಿಕಾರಿ, 1 ಅರ್ಥಶಾಸ್ತ್ರ/ವಾಣಿಜ್ಯ/ಸಂಖ್ಯಾಶಾಸ್ತ್ರ/ವ್ಯಾಪಾರ ಅಧ್ಯಯನ/ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ 30 ವರ್ಷ
ರೀಡರ್,1,ಜವಳಿ ಸಂಸ್ಕರಣೆ/ಜವಳಿ ರಸಾಯನಶಾಸ್ತ್ರ/ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ, 40 ವರ್ಷ
ಹಿರಿಯ ಉಪನ್ಯಾಸಕರು,(ಮೂಳೆರೋಗ) 1 ಆರ್ಥೋಪೆಡಿಕ್ಸ್‌ನಲ್ಲಿ ಎಂ.ಎಸ್ 50 ವರ್ಷ
ಹಿರಿಯ ಉಪನ್ಯಾಸಕರು (ರೇಡಿಯೋ ಡಯಾಗ್ನೋಸಿಸ್) 11 ರೇಡಿಯೊಡಯಾಗ್ನೋಸಿಸ್, ರೇಡಿಯಾಲಜಿಯಲ್ಲಿ ಎಂ.ಡಿ, ರೇಡಿಯಾಲಜಿಯಲ್ಲಿ ಎಂ.ಎಸ್, 50 ವರ್ಷ
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್: 1 ಅಭ್ಯರ್ಥಿಗಳು ಇಂಡೆಂಟಿಂಗ್, ಟೆಕ್ನಿಕಲ್ ಸ್ಟೋರ್ಸ್ ಮತ್ತು ಸ್ಟೋರ್ಸ್ ಅಕೌಂಟ್ ಅಥವಾ ಮೆಟೀರಿಯಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ 1-2 ವರ್ಷಗಳ ಅನುಭವವನ್ನು ಹೊಂದಿರಬೇಕು .
ವಯೋಮಿತಿ ಸಡಿಲಿಕೆ:
ಕೇಂದ್ರ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ:
ಪ. ಜಾ, ಪ. ಪಂ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ/ಒಬಿಸಿ, ಪುರುಷ ಅಭ್ಯರ್ಥಿಗಳು: 25 ರೂ
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಆಗಸ್ಟ್ 2022
ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 12 ಆಗಸ್ಟ್ 2022
ಅರ್ಜಿ ಸಲ್ಲಿಕೆ ವಿಧಾನ:
*ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
*ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
*ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: upsc.gov.in