PDO ಗಳ ‘ಡಿಜಿಟಲ್ ಸಹಿ’ ಇಲ್ಲದ ಯಾವುದೇ ಪ್ರಮಾಣಪತ್ರಗಳು ಅಮಾನ್ಯ – ರಾಜ್ಯ ಸರ್ಕಾರ ಆದೇಶ

Share the Article

ಎಲ್ಲೆಡೆ ಡಿಜಿಟಲ್ ಕ್ರಾಂತಿ ಹವಾ ಎಬ್ಬಿದೆ. ಹಾಗೆನೇ ರಾಜ್ಯ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಉಂಟುಮಾಡುವ ಸಲುವಾಗಿ ಅನೇಕ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ, ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳನ್ನು ಕೂಡಾ ಡಿಜಿಟಲ್ ಮಾದರಿಯಲ್ಲಿ ಮಾಡಿದೆ. ಹೀಗಾಗಿ ಪಿಡಿಓಗಳ ಡಿಜಿಟಲ್ ಸಹಿ ಇಲ್ಲದ ಯಾವುದೇ ಪ್ರಮಾಣ ಪತ್ರಗಳು ಇನ್ಮುಂದೆ ಅಮಾನ್ಯ ಎಂಬುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತದಲ್ಲಿ ಪಾರದರ್ಶಕತೆ ತರೋ ನಿಟ್ಟಿನಲ್ಲಿ ನಾಗರೀಕ ಸೇವೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸಿದಂತ ಪಂಚತಂತ್ರ-2.2 ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯ್ತಿಗಳು ನಡೆಸಬೇಕು ಎಂದು ತಿಳಿಸಿದೆ.

ಪಂಚತಂತ್ರ 2.0 ಮೂಲಕವೇ ನಾಗರೀಕ ಸೇವೆಗಳನ್ನು ಡಿಜಿಟೀಕರಣಗೊಳಿಸಲಾಗಿದೆ. ಪಂಚತಂತ್ರ ತಂತ್ರಾಂಶವನ್ನು ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಜುಲೈ.6ರಿಂದಲೇ ಅನುಷ್ಠಾನಗೊಳಿಸಲಾಗಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಹಾಗಾಗಿ ಇನ್ಮುಂದೆ ಗ್ರಾಮ ಪಂಚಾಯ್ತಿ ನೀಡುವಂತಹ ನಾನಾ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪಂಚತಂತ್ರ ತಂತ್ರಾಂಶದ ಮೂಲಕವೇ ಸಂಸ್ಕರಿಸಿ, ವಿಲೇವಾರಿ ಮಾಡಬೇಕು. ರಸೀದಿಗಳ ಮೇಲೆ ಪಿಡಿಓ ಡಿಜಿಟಲ್ ಸಹಿ, ವಿತರಣೆ ಸಂಖ್ಯೆ, ಇನ್ನಿತರ ಪೂರಕ ಮಾಹಿತಿಯನ್ನು ಹೊಂದಿರ ಬೇಕು. ಇಲ್ಲದಿದ್ದರೆ ಇದ್ದರೆ ಆ ಪ್ರಮಾಣ ಪತ್ರ ಅಮಾನ್ಯ ಎಂಬುದಾಗಿ ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

Leave A Reply