ವಿವಾಹಿತ ನಟನೋರ್ವನಿಂದ ನಟಿಯ ಜೊತೆ ಸುತ್ತಾಟ, ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ, ವೀಡಿಯೋ ವೈರಲ್

ಗಂಡ ಹೆಂಡತಿಯರ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ ಕೊಟ್ಟರೆ ಆಗುವುದೇ ಇದು. ಅದು ಯಾರೇ ಆಗಿರಲಿ ಗಂಡಾಗಲಿ ಅಥವಾ ಹೆಣ್ಣಾಗಲಿ. ಮದುವೆಯಾದ ವ್ಯಕ್ತಿಯ ಹಿಂದೆ ಹೋದರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ಅದರಲ್ಲೂ ಸೆಲೆಬ್ರಿಟಿಗಳ ಸಂಸಾರದ ಗಲಾಟೆ ತುಂಬ ವೇಗವಾಗಿ ಹರಡುತ್ತದೆ.

 

ನಟ ಬಾಬುಶಾನ್ ಮೊಹಂತಿಮತ್ತು ಪ್ರಕೃತಿ ಮಿಶ್ರಾ ಎಂಬ ಯುವತಿ ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಟನ ಪತ್ನಿ ಬಂದು ಅಡ್ಡಗಟ್ಟಿದ್ದಾರೆ. ಅಲ್ಲದೇ ಸಿಟ್ಟುಗೊಂಡು ಪ್ರಕೃತಿ ಮೇಲೆ ಅವರು ಹಲ್ಲೆ ಕೂಡಾ ಮಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ತೆಲುಗು ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವೆ ಇಂಥ ಜಟಾಪಟಿ ಏರ್ಪಟ್ಟಿತ್ತು. ಈಗ ಒಡಿಯಾ ಚಿತ್ರರಂಗದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ನಟ ಬಾಬುಶಾನ್ ಮೊಹಂತಿ ಅವರು ನಟಿ ಪ್ರಕೃತಿ ವಿಶ್ರಾ ಜೊತೆ ಸುತ್ತಾಡುತ್ತಿರುವುದನ್ನು ಖಂಡಿಸಿ ಅವರ ಪತ್ನಿ ತೃಪ್ತಿ ಅವರು ರಂಪಾಟ ಮಾಡಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗಿದೆ.

ಒಡಿಯಾ ಸಿನಿಮಾ ಮತ್ತು ಹಿಂದಿ ಕಿರುತೆರೆಯಲ್ಲಿ ನಟಿ ಪ್ರಕೃತಿ ಮಿಶ್ರಾ ಅವರು ಬಹಳ ಖ್ಯಾತಿ ಪಡೆದ ನಟಿ. ಈ ನಟಿ ಜೊತೆ ಸಿನಿಮಾವೊಂದರಲ್ಲಿ ಬಾಬುಶಾನ್ ಮೊಂಹತಿ ಜೊತೆಯಾಗಿ ನಟಿಸಿದ್ದಾರೆ. ಅದೇನೋ ಗೊತ್ತಿಲ್ಲ, ನಂತರ ಇಬ್ಬರ ನಡುವಿನ ಸ್ನೇಹ ಹೆಚ್ಚಾಗಿದೆ. ಈ ವಿಚಾರ ಹೆಂಡತಿಗೆ ತಿಳಿಯಲು ಹೆಚ್ಚು ದಿನ ಹಿಡಿಯಲಿಲ್ಲ. ತನ್ನ ಗಂಡ ಬಾಬುಶಾನ್ ಮತ್ತು ಪ್ರಕೃತಿ ಮಿಶ್ರಾ ನಡುವಿನ ಸಂಬಂಧ ಅಂತ್ಯಗೊಳಿಸಲು ತೃಪ್ತಿ ಅವರು ಇಬ್ಬರನ್ನೂ ಒಟ್ಟಿಗೆ ಹಿಡಿದಿದ್ದಾರೆ.

‘ನಮ್ಮ ಸಂಸಾರ ಚೆನ್ನಾಗಿಯೇ ನಡೆದಿತ್ತು. ಆದರೆ ಪ್ರಕೃತಿ ಎಂಟ್ರಿ ಆದ ನಂತರ ಈ ರೀತಿ ಆಗಿದೆ’ ಎಂದು ತೃಪ್ತಿ ಹೇಳಿದ್ದಾರೆ. ಹಲ್ಲೆ ಮಾಡಿದ್ದಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಂದು ದಿನ ಬಾಬುಶಾನ್ ಮೊಹಂತಿ ಮತ್ತು ಪ್ರಕೃತಿ ಮಿಶ್ರಾ ಒಂದೇ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ
ಅವರು, ‘ನನ್ನ ಕುಟುಂಬದವರಿಗೆ ನೋವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ಕುಟುಂಬದವರಿಗೆ ಇಷ್ಟ ಇಲ್ಲ ಎಂದರೆ ನಾನು ಪ್ರಕೃತಿ ಜತೆ ಸಿನಿಮಾ ಮಾಡಲ್ಲ.
ಅನಿವಾರ್ಯವಾದರೆ, ಭವಿಷ್ಯದಲ್ಲಿ ಯಾವ ನಟಿಯ ಜೊತೆಗೂ ಸಿನಿಮಾ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

https://www.instagram.com/tv/CgXQbCAstj6/?utm_source=ig_web_copy_link

Leave A Reply

Your email address will not be published.