ಆತ ತೀರಾ ಬಡವ, ಆದರೆ ಪ್ರೀತಿಗೆ ಬಡತನವಿಲ್ಲ…ಲೋಕಲ್ ಟ್ರೈನ್ ನಲ್ಲಿ ತಂದೆ ಮಗಳ ಪ್ರೀತಿಯ ಸುಂದರ ದೃಶ್ಯ!!!

ತಂದೆ ಮಗಳ ಸಂಬಂಧದ ವೀಡಿಯೋ ಇದು. ಆತ ಬಡವನಾದರೂ, ಪ್ರೀತಿಗೆ ಬಡತನವಿಲ್ಲ. ಹೌದು, ಆತ ತೀರಾ ಬಡವ. ಈ ತಂದೆಯ ನಿರ್ಮಲ ಪ್ರೀತಿಗೆ ನಿಜಕ್ಕೂ ಕೋಟಿ ಹಣ ಕೂಡಾ ಸಾಟಿಯಿಲ್ಲ. ತಂದೆ ಹಾಗೂ ಮಗಳ ನಡುವಿನ ಸಂಬಂಧ ತುಂಬಾ ಅಮೋಘವಾದುದು. ಅದು ಬಡತನವೇ ಇರಲಿ ಸಿರಿತನವೇ ಇರಲಿ ಪ್ರೀತಿಗೆ ಯಾವುದೇ ಕೊರತೆ ಇರುವುದಿಲ್ಲ.

 

ಈ ವೀಡಿಯೋ ಆತ ತನ್ನ ಕಂದನಿಗೆ ತೋರಿಸೋ ವೀಡಿಯೋ ಜೊತೆ ಜೊತೆಗೆ ಜೀವನದ ಜವಾಬ್ದಾರಿಯ ಹೊರೆಯೂ ಆತನಲ್ಲಿ ಕಾಣಿಸುತ್ತದೆ. ಮಗುವಿಗೆ ಉತ್ತಮ ಭವಿಷ್ಯ ನೀಡಬೇಕು ಎನ್ನುವುದು ಆತನ ಮುಖದಲ್ಲಿ ಎದ್ದು ಕಾಣುತ್ತದೆ.

ಅಂದ ಹಾಗೆ ಈ ವೀಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಗೆ ತಿಂಡಿ ತಿನ್ನಿಸುತ್ತಿದೆ. ತಂದೆ ಮಗುವಿನ ತಲೆ ನೇವರಿಸುತ್ತಾ ತಿಂಡಿ ತಿನ್ನುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋ ನಿಜಕ್ಕೂ ಎಲ್ಲರನ್ನು ಭಾವುಕರನ್ನಾಗಿಸಿದೆ.

ತಂದೆ ಮಗಳು ರೈಲೊಂದರ ಜನರಲ್ ಬೋಗಿಯಲ್ಲಿ ಸಾಗುತ್ತಿದ್ದಾರೆ. ಪುಟ್ಟ ಮಗಳು ತಂದೆಗೆ ಹಣ್ಣನ್ನು ತಿನ್ನಿಸುತ್ತಿದ್ದಾಳೆ. ಜೊತೆಗೆ ಇಬ್ಬರು ಸಂವಹನ ನಡೆಸುತ್ತಿದ್ದಾರೆ. ಮುಂಬೈಯ ಲೋಕಲ್ ರೈಲೊಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದೆ.

https://www.instagram.com/reel/CfzFcVMLvML/?utm_source=ig_web_copy_link

ಸಾಮಾನ್ಯವಾಗಿ ಮಗಳೆಂದರೆ ಅಪ್ಪನಿಗೆ ಒಂದು ಹಿಡಿ ಹೆಚ್ಚೇ ಪ್ರೀತಿ. ಮಗಳಿಗೂ ಅಷ್ಟೇ ಅಪ್ಪನ ಮೇಲೆ ಎಲ್ಲಿಲ್ಲದ ಮಮಕಾರ. ಬಹುತೇಕ ಅಪ್ಪಂದಿರು ತಮ್ಮ ಅಮ್ಮನನ್ನು ಮಗಳಲ್ಲಿ ಕಾಣುತ್ತಾರೆ. ಹಾಗೆಯೇ ಬಹುತೇಕ ಹೆಣ್ಣು ಮಕ್ಕಳ ಮೊದಲ ಹೀರೋ ಅಪ್ಪ. ಹಾಗಾಗಿಯೇ ಈ ನಿಷ್ಕಲ್ಮಶ ಪ್ರೀತಿಯೇ ಇಲ್ಲಿ ಎದ್ದು ಕಾಣುತ್ತಿದೆ.

ಈ ವಿಡಿಯೋವನ್ನು 50 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಇದೇ ಸುಂದರವಾದ ಜೀವನ ಜನರು ಹಾಗೂ ವಸ್ತುಗಳ ಮೇಲೆ ಕಡಿಮೆ ನಿರೀಕ್ಷೆ ಹೆಚ್ಚು ತೃಪ್ತಿ ಇದ್ದಾಗ ಈ ಖುಷಿ ಸಿಗಲು ಸಾಧ್ಯ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಅಪ್ಪ ಮಗಳ ಪ್ರೀತಿ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಅಪ್ಪ ಎಂದರೆ ಆಕಾಶ. ಆತನ ನಿಸ್ವಾರ್ಥ ಪ್ರೀತಿ ಬಣ್ಣಿಸಲಸಾಧ್ಯ.

Leave A Reply

Your email address will not be published.