ಪತ್ರಿಕಾಂಗ ಸತ್ಯ ಸತ್ಯತೆಯನ್ನು ಪರಿಶೀಲಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಬಿತ್ತರಿಸುವ ಕೆಲಸ ಮಾಡುತ್ತದೆ: ಮಂಜುನಾಥ ಪಂಡಿತ್
ಜಗಳೂರು :25-ಕಣ್ವಕುಪ್ಪೆ ಗವಿಮಠದ .ಶ್ರೀ. ಶ್ರೀ. ಶ್ರೀ.ಡಾ||ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಸಮ್ಮುಖದಲ್ಲಿ ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ
ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮ ಉದ್ದೇಶಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ,ಇತ್ತೀಚಿನ ಪತ್ರಿಕೆಗಳಲ್ಲಿ ಕೇವಲ ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಮಾತ್ರವಲ್ಲ ವಿವಿಧ ಕ್ಷೇತ್ರಗಳಿಗೂ ಒತ್ತು ಕೊಟ್ಟು ಸಮಾಜದಲ್ಲಿ ಭಿತ್ತರಿಸಿದರೆ ಬದಲಾವಣೆ ಸಾಧ್ಯ ಎಂದರು.
ಜಗಳೂರಿನಲ್ಲಿ ತಾಲೂಕು ಸಂಘಕ್ಕೆ ಅವಿರೋಧವಾಗಿ ಎರಡನೇ ಬಾರಿ ಅಧ್ಯಕ್ಷರಾಗಿರುವ ಚಿದಾನಂದ ಜಿ.ಎಸ್ ಅವರ ನೇತೃತ್ವದಲ್ಲಿ ಪಾರದರ್ಶಕವಾಗಿ ದಕ್ಷತೆಯಿಂದ ಆಯಾವ್ಯ ಬಜೆಟ್ ಮಂಡಿಸಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕನ್ನಡಭಾರತಿ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ್ ಕಬ್ಬೂರು ಉಪನ್ಯಾಸ ನೀಡಿ ಮಾಧ್ಯಮಲೋಕ ಸಾರ್ವಜನಿಕರಿಗೆ ನ್ಯಾಯಕೊಡಿಸುವಲ್ಲಿ ಕಾನೂನಿಗಿಂತಲೂ ಅಧಿಕ ಶಕ್ತಿಹೊಂದಿದೆ.ಆದರೆ ಆರ್ಥಿಕ ಸಂಪನ್ಮೂಲಗಳಿಲ್ಲ ಸಂಕಷ್ಟಗಳ ಮಧ್ಯೆ ಸೇವೆಗೈಯುವುದು ಸಾಮಾಜಿಕ ಹೊಣೆಗಾರಿಕೆಯನ್ನು ಬಿಂಬಿಸುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಅವರ ತಾಯಿ ಲಕ್ಷ್ಮಮ್ಮ ಇವರ ಸ್ಮರಣಾರ್ಥವಾಗಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಹತ್ತು ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿ ಪತ್ರಕರ್ತರ ಕಷ್ಟ-ಸುಖ ಗಳಿಗೆ ಮತ್ತು ಅನಾರೋಗ್ಯಕ್ಕೆ ಒಳಗಾದರೆ. ಈ ನನ್ನ ಅಲ್ಪ ಕಾಣಿಕೆ ಬಳಸಿಕೊಳ್ಳಲಿ ಎಂದರು .
ದಾವಣಗೆರೆ ಕಾರ್ಯನಿರತ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ನೈಜ ಸುದ್ದಿಗಳಿಗೆ ಮನ್ನಣೆಯಿಲ್ಲ ದಬ್ಬಾಳಿಕೆ ದೌರ್ಜನ್ಯ ಸಲ್ಲದು.ನಾವು ಯಾವುದೇ ಭಯವಿಲ್ಲದೆ ಎದೆಗಾರಿಕೆಯಿಂದ ಪ್ರಾಮಾಣಿಕವಾಗಿ ವೃತ್ತಿನಿರತರಾಗಿದ್ದೇವೆ ಎಂದರು.
ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ ಮಾತನಾಡಿ, ಎರಡನೇ ಬಾರಿ ತಾಲೂಕು ಅಧ್ಯಕ್ಷನಾಗಿ ಆಯ್ಕೆಮಾಡಿದ ಸರ್ವ ಪದಾಧಿಕಾರಿಗಳಿಗೆ ಕೃತಜ್ಞತೆಗಳ ಸಲ್ಲಿಸಿದರು. ಅಣಬೂರು ಮಠದ ಕೊಟ್ರೇಶ್ ಮಾತನಾಡಿ ಕಾರ್ಯಕ್ರಮವನ್ನು ನಮ್ಮ ಎಲ್ಲಾ ಪತ್ರಕರ್ತ ಪದಾಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯೋಜನೆ ಮಾಡಲಾಗಿದೆ ಮುಂದಿನ ಪೀಳಿಗೆಗೆ ಇದು ನಾವು ಹಾಕಿದ ಬುನಾದಿಯಾಗಿದೆ ಹಿರಿಯ ಪತ್ರಕರ್ತರ ಹಿಂದೆ ನಾವು ಯಾವತ್ತೂ ಇರುತ್ತೇವೆ.
ಪೊಲೀಸ್ ಆರಕ್ಷಕ ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಂಗ. ನ್ಯಾಯಾಂಗ.ಶಾಸಕಾಂಗ.ಈ ಮೂರು ಅಂಗಗಳು ನಮ್ಮ ರಾಷ್ಟ್ರ ಲಾಂಛನದ ಮೂರೂ ಸಿಂಹಗಳು ಇದ್ದಂತೆ ಆದರೆ ನಾಲ್ಕನೇ ಅಂಗವೇ ಪತ್ರಿಕಾ ಅಂಗ ಈ ಮೇಲಿನ ಮೂರು ಅಂಗಗಳು ಜನರ ಕಣ್ಣಿಗೆ ಕಾಣುವಂತೆ ಕೆಲಸ ಮಾಡುತ್ತಾರೆ. ಆದರೆ ಪತ್ರಿಕಾಂಗ ಸತ್ಯ ಸತ್ಯತೆಯನ್ನು
ಪರಿಶೀಲಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಬಿತ್ತರಿಸುವ ಕೆಲಸ ಮಾಡುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸೈಯದ್ ವಾಸಿಂ. ಪ್ರಧಾನ ಕಾರ್ಯದರ್ಶಿ, ಲೋಕೇಶ್.ಎಮ್. ಕಾರ್ಯದರ್ಶಿ, ರವಿಕುಮಾರ್ ಜೆ. ಓ.ಖಜಾಂಚಿ, ಜಗದೀಶ್. ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು.ಎಚ್ ಮರೇನಹಳ್ಳಿ.ಮಂಜಣ್ಣ. ಓ.ರಾಜಪ್ಪ ಎಂ.ಧನ್ಯಕುಮಾರ್.ಎಸ್ ಸೇವಾ ಸ್ವೀಕಾರ ಪ್ರತಿಜ್ಞಾವಿಧಿ ಪಡೆದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳಾದ ಗುರುಮೂರ್ತಿ,ಚನ್ನವೀರಯ್ಯಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕೃದ್ದೀನ್,ಸುಬಾನ್ ಬಿ.ಪಿ,ತಾ.ಪಂ ಇ.ಓ ಲಕ್ಷ್ಮೀಪತಿ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಜಲಾನಯನ ಇಲಾಖೆಯ ಚೌಡಪ್ಪ, ಹಿರಿಯ ಪತ್ರಕರ್ತರಾದ ಸಜ್ಜನರ ವಾಣಿ ಸಂಪಾದಕರಾದ ಬಸವರಾಜ್ .ಎಚ್.ಆರ್., ಬಸವರಾಜ್ ಪತ್ರಕರ್ತರಾದ ಸೋಮನಗೌಡ ಮಾದಿಹಳ್ಳಿ.ತಿಪ್ಪೇಸ್ವಾಮಿ.ಮಹಾಲಿಂಗಪ್ಪ.ಮಾರಪ್ಪ.ಮಂಜುನಾಥ್. ಮಾರುತಿ. ಜಗದೀಶ್.ವೇದಮೂರ್ತಿ.ರಕೀಬ್.ಸಂದೀಪ್. ಮಾಂತೇಶ್ ಬ್ರಹ್ಮ.ಸೇರಿದಂತೆ ಎಲ್ಲಾ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.