5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಖಾತೆ ಹ್ಯಾಕ್, 30 ಸಾವಿರ ಡಾಲರ್ ಗೆ ಡೇಟಾ ಮಾರಾಟ!
ನವದೆಹಲಿ: ಟೆಕ್ನಾಲಜಿಗಳು ಮುಂದುವರಿಯುತ್ತಿದ್ದಂತೆ, ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದಾರೆ. ಇದೀಗ ಹೊಸ ವರದಿಯೊಂದು, ಟ್ವಿಟ್ಟರ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ.
ಹೊಸ ವರದಿಯೂ, 5.4 ಮಿಲಿಯನ್ ಬಳಕೆದಾರರ ಖಾತೆಯ ವಿವರಗಳನ್ನು ಕದಿಯಲಾಗಿದ್ದು, ಹ್ಯಾಕರ್ ಸೆಟ್ ಅನ್ನು $ 30,000 ಕ್ಕೆ ಮಾರಾಟಕ್ಕೆ ನೀಡುತ್ತಿದ್ದಾರೆ ಎಂದು ತಿಳಿಸಿದೆ.
ಆದರೆ, 5.4 ಮಿಲಿಯನ್ ಬಳಕೆದಾರರ ಹ್ಯಾಕ್ ಚಿಕ್ಕ ಸಂಖ್ಯೆಯಾಗಿದೆ ಎಂದು ಆಪಲ್ಇನ್ಸೈಡರ್ ವರದಿ ತಿಳಿಸಿದೆ. ಏಕೆಂದರೆ, ಆಗಸ್ಟ್ 2021 ರಲ್ಲಿ 478 ಮಿಲಿಯನ್ ಟಿ-ಮೊಬೈಲ್ ಗ್ರಾಹಕರ ಡಾಟಾ ಕದಿಯಲಾಗಿತ್ತು.
ಅಷ್ಟೇ ಅಲ್ಲದೆ,ಅದೇ ತಿಂಗಳ ಕೊನೆಯಲ್ಲಿ ಪರಿಣಾಮ ಬೀರಿದ ಎಟಿ & ಟಿಯ 70 ಮಿಲಿಯನ್ ಬಳಕೆದಾರರಿಗೆ ಹೋಲಿಸಿದರೆ ಇದು ಇನ್ನೂ ಚಿಕ್ಕದಾಗಿದೆ. ಸೈಬರ್ ದಾಳಿಗಳ ಹೆಚ್ಚಳದ ನಡುವೆ ತನ್ನ ಆಧಾರ್ ಡೇಟಾವನ್ನು ರಕ್ಷಿಸಲು ಯುಐಡಿಎಐ 20 ನೈತಿಕ ಹ್ಯಾಕರ್ ಗಳನ್ನು ಕೋರಿದೆ.