ಹಾವಿನ ತಲೆ ಕತ್ತರಿಸಿ ಸೂಪ್ ತಯಾರಿಸಿದ ಬಾಣಸಿಗ, 20 ನಿಮಿಷದಲ್ಲೇ ನಡೆಯಿತು ಬೆಚ್ಚಿಬೀಳಿಸೋ ಘಟನೆ
ಚೀನಾದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಆದರೆ ಎಂಥವರನ್ನೂ ಕೂಡಾ ಬೆಚ್ಚಿ ಬೀಳಿಸುತ್ತೆ. ಇದೊಂದು ಹಾವಿನ ಕಥೆ. ಅದು ಕೂಡಾ ಸತ್ತ ಹಾವಿನ ಕಥೆ.
ದಕ್ಷಿಣ ಚೀನಾದ ರೆಸ್ಟೋರೆಂಟ್ ವೊಂದು ಹಾವಿನ ಸೂಪ್‌ಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ನಾಗರ ಹಾವಿನ ಸೂಪ್ ತಯಾರಿಸುವಾಗ ಒಂದು ಅವಘಡ ನಡೆದಿದೆ. ಇದರಿಂದಾಗಿ ಬಾಣಸಿಗ ಪ್ರಾಣ ಕಳೆದುಕೊಂಡಿದ್ದಾನೆ. ಈತ ಕೋಬ್ರಾ ಹಾವಿನ ಮಾಂಸದಿಂದ ತಾಜಾ ಸೂಪ್ ತಯಾರಿಸುತ್ತಿದ್ದ. ಇದಕ್ಕಾಗಿ ನಾಗರ ಹಾವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ತಲೆಯನ್ನು ಪಕ್ಕದಲ್ಲಿಟ್ಟಿದ್ದ. ಸೂಪ್ ತಯಾರಿಸಲು ಆತನಿಗೆ ಸುಮಾರು 20 ನಿಮಿಷ ತಗೊಂಡಿದ್ದೇನೆ. ಸೂಪ್ ರೆಡಿಯಾದ ನಂತರ ಆತ ಅಡುಗೆ ಮನೆ ಸ್ವಚ್ಛಗೊಳಿಸಲು ಆರಂಭಿಸಿದ್ದಾನೆ. ಈ ಸಮಯದಲ್ಲಿ ಕಸದ ಬುಟ್ಟಿಗೆ ಎಸೆಯಲೆಂದು ಕತ್ತರಿಸಿ ಇಟ್ಟಿದ್ದ ನಾಗರಹಾವಿನ ತಲೆಯ ಭಾಗವನ್ನು ಕೈಯ್ಯಲ್ಲಿ ಇಟ್ಕೊಂಡು ಮೇಲಕ್ಕೆತ್ತಿದ್ದಾನೆ. ಈ ವೇಳೆ ನಾಗರಹಾವು ಬಾಣಸಿಗನಿಗೆ ಕಚ್ಚಿದೆ. ಕೂಡಲೇ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ಆದರೆ ವೈದ್ಯರು ಬರುವ ಮುನ್ನವೇ ಬಾಣಸಿಗ ಮೃತಪಟ್ಟಿದ್ದಾನೆ.
ಆದರೆ ವಿಶೇಷವೇನೆಂದರೆ ತಲೆ ಕತ್ತರಿಸಿದ ಬಳಿಕವೂ ಸುಮಾರು 1 ಗಂಟೆ ನಾಗರಹಾವಿಗೆ ಜೀವವಿತ್ತು. ಶಿರಚ್ಛೇದ ಮಾಡಿದ 20 ನಿಮಿಷಗಳ ನಂತರವೂ ನಾಗರಹಾವು ಜೀವಂತ ಇರುತ್ತೆ ಎಂದು ಬಾಣಸಿಗನಿಗೆ ತಿಳಿದಿರಲಿಲ್ಲ. ತಜ್ಞರ ಪ್ರಕಾರ ಇದು ಬಹಳ ಅಪರೂಪದ ಪ್ರಕರಣ. ಸರೀಸೃಪಗಳು ಕೊಲ್ಲಲ್ಪಟ್ಟ ನಂತರ ಒಂದು ಗಂಟೆಯವರೆಗೆ ಬದುಕುತ್ತೆ ಎಂದು ಅವರು ಹೇಳುತ್ತಾರೆ.
ಅದರಲ್ಲೂ ನಾಗರಹಾವಿನ ವಿಷವು ತುಂಬಾ ಅಪಾಯಕಾರಿ. ಹಾಗಾಗಿ ನಾಗರ ಹಾವು ಕಚ್ಚಿ 30 ನಿಮಿಷದಲ್ಲಿ ಕೈಯಲ್ಲಿ ಎತ್ತಿದ್ದಾನೆ. ಈ ವೇಳೆ ನಾಗರಹಾವು ಬಾಣಸಿಗನಿಗೆ ಕಚ್ಚಿದೆ. ಕೂಡಲೇ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ಆದ್ರೆ ವೈದ್ಯರು ಬರುವ ಮುನ್ನವೇ ಬಾಣಸಿಗ ಮೃತಪಟ್ಟಿದ್ದಾನೆ.
ಶಿರಚ್ಛೇದ ಮಾಡಿದ 20 ನಿಮಿಷಗಳ ನಂತರವೂ ನಾಗರಹಾವು ಬದುಕುಳಿಯಬಹುದೆಂದು ಬಾಣಸಿಗನಿಗೆ ತಿಳಿದಿರಲಿಲ್ಲ. ತಜ್ಞರ ಪ್ರಕಾರ ಇದು ಬಹಳ ಅಪರೂಪದ ಪ್ರಕರಣವಾಗಿದೆ.