ರಾಜಕೀಯಕ್ಕೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ! ಯಾವ ಪಕ್ಷ ಗೊತ್ತೇ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಲ್ಲಿ ನಟಿಸಿ ಪರಭಾಷೆಯಲ್ಲಿ ಮಿಂಚುತ್ತಿರುವ ಖ್ಯಾತ ನಟಿ. ರಶ್ಮಿಕಾ ಈಗ ಎಲ್ಲರ ಹಾಟ್ ಫೆವರೇಟ್ ನಟಿ ಎಂದರೆ ತಪ್ಪಾಗಲಾರದು. ಈಗ ಈ ನಟಿಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಅಲ್ಲದೆ ಹಿಂದಿ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಆದರೆ ಈಗ ಕೂರ್ಗ್ ಬ್ಯೂಟಿ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಹೌದು, ರಶ್ಮಿಕಾ ಕಾಂಗ್ರೆಸ್ ಪಕ್ಷದ ಪರವಾಗಿ ಕರ್ನಾಟಕದಿಂದ ಸಂಸದೆಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ವೈರಲ್ ಆಗ್ತಾ ಇದೆ. ಇದು ರಶ್ಮಿಕಾ ಉವಾಚ ಅಲ್ಲ. ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿರುವ ಭವಿಷ್ಯವಾಣಿ.

ತೆಲುಗಿನ ವೇಣು ಸ್ವಾಮಿ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆ ಸಂಸದರಾಗುತ್ತಾರೆ ಎಂಬ ಮಾತು ಹೇಳಿದ್ದಾರೆ.

ಕರ್ನಾಟಕದ ನಟಿ ರಮ್ಯಾ ಅವರ ರೀತಿಯಲ್ಲೇ ಅವರು ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನ ಅಲಂಕರಿಸುತ್ತಾರೆ. ನಟಿ ರಮ್ಯಾ ಅವರು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸದೆಯೂ ಆಗಿದ್ದರು. ಇದೇ ರೀತಿ ರಶ್ಮಿಕಾ ಮಂದಣ್ಣ ಕೂಡಾ ರಾಜಕೀಯದಲ್ಲಿ ಎತ್ತರಕ್ಕೆ ಏರುತ್ತಾರೆ. ಸಂಸದೆ ಆಗುವುದಂತೂ ಖಡಾಖಂಡಿತ ಎಂಬ ಭವಿಷ್ಯವಾಣಿಯನ್ನು ವೇಣು ಸ್ವಾಮಿ ಹೇಳಿದ್ದಾರೆ.

Leave A Reply

Your email address will not be published.