ಮದೆನಾಡು : ಆತಂಕದಲ್ಲಿ ಜನತೆ 2018ರ ಘಟನೆ ಮರುಕಳಿಸುವ ಆತಂಕ

Share the Article

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರೀ ಶಬ್ದದಿಂದ ಗುಡ್ಡವೊಂದು ಕುಸಿದಿದೆ. 2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟವಾಗಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಶಬ್ಧದೊಂದಿಗೆ ಗುಡ್ಡ ಕುಸಿದಿದೆ.

ಬೆಟ್ಟದ ಕೆಳಭಾಗದಲ್ಲಿ 15 ಮನೆಗಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಆದರೂ ಮಳೆಯ ತೀವ್ರತೆ ಹೆಚ್ಚಾದಲ್ಲಿ ಬೆಟ್ಟಕುಸಿಯುವ ಆತಂಕವಿದೆ.
ಸದ್ಯಕ್ಕೆ ಬೆಟ್ಟ ಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಇದು ಎಲ್ಲಿಂದು ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಮಳೆ ನಿಂತರೂ ಬೆಟ್ಟದ ತಪ್ಪಲಿನ ನಿವಾಸಿಗಳು ಭಾರೀ ಆತಂಕಗೊಂಡಿದ್ದಾರೆ.

ಸ್ಥಳಕ್ಕೆ ಮದೆನಾಡು ಗ್ರಾಮ ಲೆಕ್ಕಿಗ ರಮೇಶ್ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply