ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ | ಮಾಸಿಕ ಪಿಂಚಣಿ 3 ಸಾವಿರ ರೂ.ಗೆ ಏರಿಸಿದ ರಾಜ್ಯ ಸರಕಾರ

ರಾಜ್ಯ ಸರ್ಕಾರದಿಂದ ಕಾರ್ಮಿಕ ವರ್ಗದವರಿಗೆ ಭರ್ಜರಿ ಸಿಹಿಸುದ್ದಿ ಎಂದೇ ಹೇಳಬಹುದು. ಸರಕಾರ ಶ್ರಮಿಕ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ಎರಡು ಸಾವಿರ ರೂ.ನಿಂದ ಮೂರು ಸಾವಿರ ರೂ.ವರೆಗೆ ಏರಿಕೆ ಮಾಡಿದೆ. ಈ ಕುರಿತು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಧನ ಸಹಾಯದಲ್ಲಿ ಏರಿಕೆ ಮಾಡಿರುವುದರ ಜೊತೆಗೆ ನೋಂದಣಿ ವಂತಿಗೆ ರಿಯಾಯತಿ, ಜೇಷ್ಠತೆ ಆಧಾರದಲ್ಲಿ ಟೂಲ್ ಕಿಟ್ ವಿತರಣೆ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಇನ್ನು ಫಲಾನುಭವಿಗಳ ನೋಂದಣಿ ವೇಳೆ ಮಂಡಳಿಗೆ ಪಾವತಿಸಬೇಕಿರುವ ವಂತಿಗೆ ಹಣ ಸಂಪೂರ್ಣ ಮನ್ನಾ ಮಾಡುವ ಶ್ರಮ ಸಾಮರ್ಥ್ಯ ಸೌಲಭ್ಯದಡಿ ಮಂಡಳಿಯ ಫಲಾನುಭವಿಗಳು ತರಬೇತಿ ಪಡೆಯದೆಯೇ ಜೇಷ್ಠತೆ ಆಧಾರದಲ್ಲಿ ಟೂಲ್ ಕಿಟ್ ಪಡೆಯಲು ಗೃಹ ಭಾಗ್ಯ ಸೌಲಭ್ಯದಡಿ ಅರ್ಹಹ ಫಲಾನುಭವಿಗಳಿಗೆ ಮನೆ ಕಟ್ಟಲು ನೀಡುವ ಧನ ಸಹಾಯ 10 ಕಂತುಗಳಲ್ಲಿ ನೀಡಲು ಸರಳೀಕರಿಸಿ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಗಿದೆ.

Leave A Reply

Your email address will not be published.