ದೇಶದ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆ ಶಾಕ್!

ದಿನ ಕಳೆದಂತೆ ಜಗತ್ತು ದುಬಾರಿ ದುನಿಯಾದತ್ತ ದಾಪು ಕಾಲಿಡುತ್ತಲೇ ಇದೆ. ಎಲ್ಲೆಲ್ಲೂ ದರ ಏರಿಕೆಯದೇ ಸದ್ದು. ಜಿಎಸ್ ಟಿ ಹೆಚ್ಚಳದಿಂದ ದಿನ ಬಳಕೆಯ ವಸ್ತುಗಳನ್ನು ಖರೀದಿಸುವ ಮುನ್ನ ಒಂದು ಬಾರಿ ಯೋಚಿಸುವಂತೆ ಆಗಿದೆ. ಪೆಟ್ರೋಲ್‌, ಅಡುಗೆ ಅನಿಲ ಹೀಗೆ ಜನಸಾಮಾನ್ಯರ ದಿನಬಳಕೆಯ ಅಗತ್ಯ ವಸ್ತುಗಳ ದರ ಏರುತ್ತಲೇ ಇದೆ. ಇದರ ನಡುವೆ ಇದೀಗ ಕೇಂದ್ರ ಸರ್ಕಾರ ವಿದ್ಯುತ್ ಬಿಲ್ ಏರಿಕೆ ಮಾಡಲು ನಿರ್ಧರಿಸಿದೆ.

ಹೌದು. ವಿದ್ಯುತ್ 50 ರಿಂದ 80 ಪೈಸೆಗಳಷ್ಟು ದುಬಾರಿಯಾಗಲಿದ್ದು, ದೇಶದಲ್ಲಿ ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ದುಬಾರಿ ಬೆಲೆಯಿಂದಾಗಿ ಈ ನಿರ್ಧಾರ ಕೈಗೊಂಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

ವಾಸ್ತವವಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 76 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯೋಜಿಸಿದೆ. ಸರ್ಕಾರ ಮತ್ತು ವಿದ್ಯುತ್ ಕಂಪನಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದ್ದು, ಇದಕ್ಕಾಗಿ ಗ್ರಾಹಕರ ಮೇಲೆ ವಿದ್ಯುತ್ ಬಿಲ್ ಹೊರೆ ಹೆಚ್ಚಾಗಬಹುದು.

ಮೂಲಗಳ ಪ್ರಕಾರ, ಕೋಲ್ ಇಂಡಿಯಾದ ಕಲ್ಲಿದ್ದಲು ಜುಲೈ ಅಂತ್ಯದಿಂದ ಬರಲು ಪ್ರಾರಂಭಿಸುತ್ತದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಬಿಲ್ ಮೇಲೆ ಪರಿಣಾಮ ಬೀರುತ್ತದೆ. ಪೂರೈಕೆ ಕೊರತೆ ಅಕ್ಟೋಬರ್ 15ರವರೆಗೆ ಮುಂದುವರಿಯಬಹುದು. ಅಲ್ಲದೆ, ಸಮುದ್ರ ಬಂದರಿನಿಂದ ದೂರವಿದ್ದಷ್ಟೂ ವಿದ್ಯುತ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.

error: Content is protected !!
Scroll to Top
%d bloggers like this: