ಸಡನ್ ಕಟ್ ಮಾಡಿ “ಯೂಟರ್ನ್” ತಗೊಂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಿನ್ನೆ ತನ್ನ ಪುತ್ರ ವಿಜಯೇಂದ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಡುವ ನಿರ್ಧಾರ ಮಾಡಿದ, ರಾಜಕೀಯ ಸನ್ಯಾಸತ್ವ ಘೋಷಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಯೂಟರ್ನ್ ಹೊಡೆದಿದ್ದಾರೆ.

ಇಂದು ಅವರು “ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ ಅಂತಿಮ ತೀರ್ಮಾನ ವರಿಷ್ಠರ ತೀರ್ಮಾನವೇ ಅಂತಿಮ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ಧರಾಗಿರುತ್ತೇವೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಹಳೇ ಮೈಸೂರು ಭಾಗದಲ್ಲಿ ಬೇಕಾದರೂ ವಿಜಯೇಂದ್ರ ಸ್ಪರ್ಧಿಸ್ತಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಶಕ್ತಿ ಬಿ.ವೈ. ವಿಜಯೇಂದ್ರಗೆ ಇದೆ. ನಿನ್ನೆ ನಾನು ಶಿಕಾರಿಪುರದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕ್ಷೇತ್ರ ಬಿಟ್ಟುಕೊಡುವ ಮಾತುಗಳನ್ನಾಡಿದೆ” ಎಂಬ ಮಾತನ್ನಾಡಿದ್ದಾರೆ.

Leave A Reply

Your email address will not be published.