ಮಂಗಳೂರು : ಸ್ನೇಹಿತರ ಮದುವೆಗೆಂದು ಹೋದ ಯುವತಿ ನಾಪತ್ತೆ!!!

ಮಂಗಳೂರು: ಸ್ನೇಹಿತರ ಮದುವೆಗೆಂದು ಹೋದ ಯುವತಿ ನಾಪತ್ತೆಯಾಗಿರುವ ಘಟನೆಯೊಂದು ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ನಾಪತ್ತೆಯಾದ ಯುವತಿಯನ್ನು ರಾಬಿಯಾ ಪರ್ವೀನ್ (22) ಎಂದು ಗುರುತಿಸಲಾಗಿದೆ.

ಈಕೆ ನಗರದ ಲೇಡಿಗೋಶನ್ ಬಳಿಯ ಟೈಲರಿಂಗ್ ಮೆಶಿನ್‌ನ ರಿಪೇರಿ/ ಸೇಲ್ಸ್ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ವೃತ್ತಿ ಮಾಡಿಕೊಂಡಿದ್ದು, 8 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ.

ರಬಿಯಾ ಪರ್ವೀನ್ ಜು.18 ರಂದು ಎಂದಿನಂತೆ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದಾಳೆ. ನಂತರ ಸಂಜೆ ಸುಮಾರು 4:30 ಗಂಟೆಗೆ ಕೆಲಸ ಮಾಡುವ ಸ್ಥಳದಿಂದಲೇ ಬಂದರಿನಲ್ಲಿರುವ ಸ್ನೇಹಿತರ ಮದುವೆಗೆ ಹೋಗಿಬರುತ್ತೇನೆಂದು ಹೇಳಿ ಹೋದವಳು ಮನೆಗೆ ಬರದೇ ನಾಪತ್ತೆಯಾಗಿದ್ದಾಳೆ. ಈಕೆ ಫೋನ್ ನಂಬರ್ ಗೆ ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ನಾಪತ್ತೆ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ. ಈ ಘಟನೆಯ ಕುರಿತು ನಗರ ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ

Leave A Reply

Your email address will not be published.