ಮುದ್ದಿನ ಕೋಳಿಯ ಅಂತ್ಯಕ್ರಿಯೆ ಮಾಡಿದ ಡಾಕ್ಟರ್, ತಲೆ ಬೋಳಿಸಿ 13ನೇ ದಿನಕ್ಕೆ ಕಾರ್ಯ ಮಾಡಿದ ವ್ಯಕ್ತಿ!!!

ಓರ್ವ ವ್ಯಕ್ತಿ ಸತ್ತರೆ ಅಂತ್ಯಸಂಸ್ಕಾರ ಮಾಡುವ ಕ್ರಮ ಇದೆ. ಹಾಗೇನೇ ಹದಿಮೂರನೇ ದಿನ ತಿಥಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬ ವಿಚಿತ್ರ ಸಂಪ್ರದಾಯ ನಡೆದಿದೆ. ಹೌದು ಈ ರೀತಿಯ ಒಂದು ಘಟನೆ ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ.

ಹುಂಜದ ಮಾಲೀಕನೋರ್ವ ತನ್ನ ಸತ್ತ ಹುಂಜದ ಅಂತ್ಯಸಂಸ್ಕಾರ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಮನುಷ್ಯರ ತರಹ ಹದಿಮೂರನೇ ದಿನದ ತಿಥಿ ಕಾರ್ಯ ಕೂಡಾ ಮಾಡಿ ಎಲ್ಲರೂ ಆಶ್ಚರ್ಯಗೊಳ್ಳುವ ಹಾಗೇ ಮಾಡಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ಘಟನೆ ಪ್ರತಾಪ್‌ಗಢ ಜಿಲ್ಲೆಯ ಫತಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಕ್ಲಲ್ ಕಾಲಾ ಗ್ರಾಮದಲ್ಲಿ ನಡೆದಿದ್ದು, ಅಲ್ಲಿ ಡಾ. ಶಾಲಿಕ್ರಮ್ ಸರೋಜ್ ಎಂಬುವವರೇ ಈ ರೀತಿಯಾಗಿ ಮಾಡಿದ್ದು. ಇವರು ತನ್ನ ಮನೆಯಲ್ಲಿ ಇವರು ಮೇಕೆ, ಹುಂಜ ಸಾಕಿದ್ದಾರೆ. ಇವರ ಕುಟುಂಬ ಹುಂಜದ ಮೇಲೆ ಸಖತ್ ಪ್ರೀತಿ. ಅವರು ಅದಕ್ಕೆ ಲಾಲಿ ಎಂದು ಹೆಸರನ್ನು ಕೂಡಾ ಇಟ್ಟಿದ್ದರು. ಜುಲೈ 8 ರಂದು ಡಾ.ಶಾಲಿಕ್ರಮ್ ಅವರ ಮೇಕೆ ಮರಿ ಮೇಲೆ ನಾಯಿ ದಾಳಿ ಮಾಡಿತ್ತು. ಆದರೆ ಇದನ್ನು ಕಂಡು ಲಾಲಿ ನಾಯಿಯೊಂದಿಗೆ ಜಗಳ ಮಾಡಲು ಮುಂದಾಯಿತು. ಈ ಕಾಳಗದಲ್ಲಿ ಮೇಕೆಯ ಮರಿ ಬದುಕುಳಿಯಿತು. ಆದರೆ, ನಾಯಿ ದಾಳಿಯಿಂದ ಲಾಲಿ ಹುಂಜ ಗಂಭೀರವಾಗಿ ಗಾಯಗೊಂಡು ಜುಲೈ 9 ರ ಸಂಜೆ ಲಾಲಿ ಸಾವನ್ನಪ್ಪಿತು.

ನಂತರ ಡಾಕ್ಟರ್ ಕುಟುಂಬ ಲಾಲಿ ಹುಂಜದ ಅಂತ್ಯಕ್ರಿಯೆ ಮಾಡಿತು. ಆದರೆ, ಡಾ.ಶಾಲಿಕ್ರಂ ಪದ್ಧತಿಯ ಪ್ರಕಾರ, ಹದಿಮೂರನೆಯ ದಿನ ಕೋಳಿಯ ತಿಥಿ ಮಾಡುವುದಾಗಿ ಹೇಳಿದಾಗ, ಜನ ನಿಜಕ್ಕೂ ಆವಾಕ್ಕಾದರು. ಅದರಂತೆಯೇ, ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳು ನಡೆಯಿತು. ಯಾವ ರೀತಿ ಅಂತೀರಾ ? ಇಲ್ಲಿದೆ ನೋಡಿ…

ತಲೆ ಬೋಳಿಸಿಕೊಳ್ಳುವುದರಿಂದ ಹಿಡಿದು ಇತರೆ ವಿಧಿವಿಧಾನಗಳನ್ನು ಡಾಕ್ಟರ್ ಕುಟುಂಬ ಮಾಡಿತು. ಬುಧವಾರ ಬೆಳಗ್ಗೆಯಿಂದಲೇ ಮಿಠಾಯಿಗಾರರು ಹದಿಮೂರನೆಯವರ ಖಾದ್ಯವನ್ನು ಸಿದ್ಧಪಡಿಸತೊಡಗಿದರು. ಸಂಜೆ 6 ಲಾಲಿ ಮರಣದ ನಂತರ ಕುಟುಂಬವು ಅಂತ್ಯಕ್ರಿಯೆ ಮಾಡಿತು. ಸಂಜೆ 6 ಗಂಟೆಯಿಂದ ರಾತ್ರಿ ಸುಮಾರು 10 ಗಂಟೆಯವರೆಗೆ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಭೋಜನ ವ್ಯವಸ್ಥೆಯನ್ನು ಕೂಡಾ ಡಾಕ್ಟರ್ ಮಾಡಿದ್ದರು.

ಮನುಷ್ಯ ಮನುಷ್ಯನ ಪ್ರೀತಿ ಒಂದು ರೀತಿಯಾದರೆ, ಮೂಕ ಪ್ರಾಣಿಯ ಪ್ರೀತಿ ತೋರಿಸಿದ ಈ ಡಾಕ್ಟರ್ ಕುಟುಂಬದ ಪ್ರೇಮ ಮೆಚ್ಚಲೇ ಬೇಕು. ಇವರ ಮಾತೃ ಪ್ರೇಮವನ್ನು ಎಲ್ಲರೂ ಶ್ಲಾಘಿಸಬೇಕು.

error: Content is protected !!
Scroll to Top
%d bloggers like this: