ಭ್ರಷ್ಟರಿಗೆ ಮಾತ್ರ ಬಿಜೆಪಿ ಬಾಗಿಲು ತೆಗೆಯುತ್ತದೆ, ಪ್ರಾಮಾಣಿಕ ಹಿಂದುತ್ವವಾದಿಗಳಿಗೆ ಅಲ್ಲ – ಪ್ರಮೋದ್‌ ಮುತಾಲಿಕ್‌

ಕಳ್ಳರು, ದರೋಡೆಕೋರರು, ಭ್ರಷ್ಟರಿಗೆ ಮಾತ್ರ ಬಿಜೆಪಿ ಬಾಗಿಲು ತೆಗೆಯುತ್ತದೆ. ಪ್ರಾಮಾಣಿಕ ಹಿಂದುತ್ವವಾದಿಗಳಿಗೆ ಬಿಜೆಪಿಯಲ್ಲಿ ಪ್ರವೇಶ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವಿಜಯಪುರದಲ್ಲಿ ಮಾತನಾಡಿದ ಅವರು,ಲೂಟಿ ಮಾಡೋದ್ರಲ್ಲೇ ನಮ್ಮ ದೇಶ ನಡೆಯುತ್ತಿದೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ಅವರಿಗೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. “ನಮ್ಮಂತಹ ಹೋರಾಟಗಾರರು, ಪ್ರಾಮಾಣಿಕರು, ಹಿಂದುತ್ವವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ. ನಾನು ರಾಜಕೀಯ ಬಾಗಿಲನ್ನು ಬಂದ್ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಇಳಿಯಲ್ಲ. ಎಲ್ಲ ಕಳ್ಳರು, ದರೋಡೆಕೋರರು, ಭ್ರಷ್ಟರಿಗೆ ಬಿಜೆಪಿ ಬಾಗಿಲು ತೆಗೆಯುತ್ತದೆ” ಎಂದಿದ್ದಾರೆ.

ಕೆರೂರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ಭಟ್ಕಳದ ಮಹಿಳೆ ಬುರ್ಕಾದಲ್ಲಿ ಚಾಕು ತಂದು ಇರಿದಿದ್ದಾಳೆ. ಈ ಘಟನೆ ನೋಡಿದರೆ ಭಟ್ಕಳದಲ್ಲಿ ಇನ್ನೂ ಭಯೋತ್ಪಾದನೆಯ ಕುಕೃತ್ಯ ಜೀವಂತವಾಗಿದೆ. ಹಿಂದೂ ಹುಡುಗಿರನ್ನು ಚುಡಾಯಿಸುವುದನ್ನು ತಡೆಯಲು ಹೋದಾಗ ಈ ಘಟನೆ ನಡೆದಿದೆ. ಹಾಗಾದರೆ ಹಿಂದೂ ಹುಡುಗಿಯರನ್ನು ಚುಡಾಯಿಸುವುದನ್ನು ತಡೆಯಬಾರದಾ? ಹಿಂದೂ ಹುಡುಗಿಯರು, ಮಹಿಳೆಯರ ರಕ್ಷಣೆ ನಮ್ಮ ಹೊಣೆ” ಎಂದು ಮಾತನಾಡಿದರು

ಗಲಭೆ, ಕೊಲೆ, ಹಿಂದೂಗಳನ್ನು ಕೆಣಕೋದು ಇನ್ನು ನಡೆಯುವುದಿಲ್ಲ. ಏನೇ ಇದ್ದರೂ ಪ್ರಜಾಪ್ರಭುತ್ವ ಆಧಾರದ ಮೇಲೆ ಧರಣಿ ಮಾಡಿ, ದೂರು ಕೊಡಿ. ಅದನ್ನು ಬಿಟ್ಟು ಚಾಕು, ತಲವಾರ್‌ ಹಿಡಿದು ಬರೋದಕ್ಕೆ ಇದು ತಾಲಿಬಾನ್‌ ಅಲ್ಲ ಎಂದು ಸೂಚಿಸಿದರು. ಅಲ್ಲದೆ, ಹಿಂದೂ ಮಹಿಳೆಯರ ರಕ್ಷಣೆ ನಾವೇ ಮಾಡಬೇಕು. ಅದು ನಮ್ಮ ಕರ್ತವ್ಯ. ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ. ಹಿಂದೂ ಸಮಾಜ ಜಾಗೃತಿಯಾಗಿದೆ. ಮುಸ್ಲಿಮರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಹುಷಾರಾಗಿರಿ, ನಿಮ್ಮ ಪಾಡಿಗೆ ನೀವಿರಿ ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ.

Leave A Reply

Your email address will not be published.