ಪ್ಯಾಂಟ್ ಕಿಸೆಯಲ್ಲಿಟ್ಟಿದ್ದ ಮೊಬೈಲ್ ದಿಢೀರ್ ಸ್ಫೋಟ, ಯುವಕ ಆಸ್ಪತ್ರೆಗೆ ದಾಖಲು!!!
ಇತ್ತೀಚಿನ ದಿನಗಳಲ್ಲಿ ಸಣ್ಣ ಮಗುವಿನಿಂದ ಹಿಡಿದು ಮುದುಕರವರೆಗೆ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದೊಂದು ಮನುಷ್ಯನ ಅವಿಭಾಜ್ಯ ಅಂಗವೇ ಆಗಿ ಹೋಗಿದೆ ಎಂದು ಹೇಳಬಹುದು. ಅಷ್ಟು ಮಾತ್ರವಲ್ಲ ಒಂದು ಒಂದು ಫ್ಯಾಷನ್ ಕೂಡಾ ಆಗಿದೆ. ಮೊಬೈಲ್ ನಿಂದ ಎಷ್ಟೋ ಸಾರಿ ನಮಗೆ ಅರಿವಿಗೆ ಬಾರದೇ ನಮಗೆ ಗೊತ್ತಿಲ್ಲದಂತೆ ಕೆಲವು ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಒಂದು ಅಲ್ಲ ಒಂದು ರೀತಿಯ ಅನಾಹುತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಂತಹುದೇ ಒಂದು ಭೀಕರ ಸ್ಫೋಟದ ಘಟನೆಯೊಂದು ನಡೆದಿದೆ.
ಇಲ್ಲಿ ಕೂಡ ಯುವಕನೊಬ್ಬನ ಜೇಬಿನಲ್ಲಿ ಮೊಬೈಲ್ ಸ್ಪೋಟಗೊಂಡ ಘಟನೆ ಹರಿಯಾಣದಿಂದ ವರದಿಯಾಗಿದೆ. ಚಾರ್ಜ್ ಮಾಡಿದ ಬಳಿಕ ಯುವಕನ ಜೀಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಯುವಕನು ಮೊಬೈಲ್ ಚಾರ್ಜ್ ಮಾಡಿದ ಬಳಿಕ ಮೊಬೈಲನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ. ಸ್ವಲ್ಪ ಸಮಯದಲ್ಲೇ ಅದು ಜೇಬಿನಲ್ಲೇ ಸ್ಫೋಟಗೊಂಡ ಪರಿಣಾಮ ಕಾಲಿಗೆ ಗಾಯವಾಗಿದೆ.ಕೂಡಲೇ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವಕ ಸ್ಫೋಟಗೊಂಡ ಮೊಬೈಲನ್ನು ಬಹಳ ಸಮಯದಿಂದ ಬಳಸುತ್ತಿದ್ದನು ಎನ್ನಲಾಗಿದೆ. ಇನ್ನು ಮೊಬೈಲ್ ಸ್ಪೋಟ ಎಲ್ಲಾರಿಗೂ ಆತಂಕಕ್ಕೆ ಕಾರಣವಾಗಿದ್ದು ಯಾವ ಕಾರಣದಿಂದ ಸ್ಪೋಟಗೊಂಡಿದೆ ಎಂಬ ಕಾರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.