ಮಠ, ದೇವಸ್ಥಾನಗಳಿಗೆ ರಾಜ್ಯ ಸರಕಾರದಿಂದ ಭರ್ಜರಿ ಸಿಹಿ ಸುದ್ದಿ !

ಸಂಘ ಸಂಸ್ಥೆ, ಮಠ, ದೇವಸ್ಥಾನಗಳಿಗೆ ರಾಜ್ಯ ಸರಕಾರ ಬಂಪರ್ ಸಿಹಿಸುದ್ದಿಯೊಂದನ್ನು ನೀಡಿದೆ. 142.37 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

ರಾಜ್ಯದ ವಿವಿಧ ಸಮುದಾಯಗಳ ಮಠಗಳು, ದೇವಾಲಯ, ಸಂಘ ಸಂಸ್ಥೆ, ಟ್ರಸ್ಟ್‌ಗಳಿಗೆ ಬಜೆಟ್ ಹಂಚಿಕೆ ಜೊತೆ ಜೊತೆಗೆ ಸಿಎಂ ವಿಶೇಷಾನುದಾನದಡಿ ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯದ ವಿವಿಧ ಸಮುದಾಯದ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. 178 ಮಠಗಳಿಗೆ 108.02 ಕೋಟಿ ರೂ, 59 ದೇವಸ್ಥಾನಗಳಿಗೆ 21.35 ಕೋಟಿ ರೂ, 26 ಸಂಘ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಿಗೆ 13 ಕೋಟಿ ರೂ. 142.37 ಕೋಟಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

Leave A Reply

Your email address will not be published.