ಬಿಗ್ ಬಾಸ್ ಸೀಸನ್ 9 : ಕಲರ್ಸ್ ಕನ್ನಡದಿಂದ ಎಚ್ಚರಿಕೆ ಸಂದೇಶ!!!
ಎಲ್ಲೆಡೆ “ಹೌದು ಸ್ವಾಮಿ” ಯೇ ಕೇಳುತ್ತಾ ಇದೆ. ಜನ ಕಾತುರದಿಂದ ಕಾಯುವ ಶೋ ಸ್ಟಾರ್ಟ್ ಆಗಲು ಕೆಲವೇ ದಿನಗಳಿವೆ. ‘ಬಿಗ್ ಬಾಸ್’ ಸೀಸನ್ ನ ಒಂಬತ್ತನೇ ಸೀಸನ್ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅದ್ಭುತ್ ಬಿಗ್‌ಬಾಸ್ ಮನೆಯ ಕೆಲಸಗಳು ನಡೆಯುತ್ತಿದೆ.
ಹಾಗೆನೇ ಈ ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ಅವರು ಕೂಡಾ ಪ್ರೋಮೋ ಶೂಟ್ ಸಹ ಪೂರ್ಣಗೊಳಿಸಿದ್ದಾರೆ.
ಬಿಗ್‌ಬಾಸ್ 9ಕ್ಕೆ ಭಾರೀ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಲರ್ಸ್ ಕನ್ನಡ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಬಿಗ್‌ಬಾಸ್ ಕಾರ್ಯಕ್ರಮದ ಹೆಸರು ಯಾರೋ ದುಷ್ಕರ್ಮಿಗಳು ವಂಚಿಸುತ್ತಿರುವ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್ ಕನ್ನಡ ಎಚ್ಚರಿಯ ಸಂದೇಶ ಕೊಟ್ಟಿದೆ. ಅದರ ಸಾರಾಂಶ ಈ ಕೆಳಕಂಡಂತಿದೆ.
ಬಿಗ್‌ಬಾಸ್ ಆಕಾಂಕ್ಷಿಗಳ ಗಮನಕ್ಕೆ…
ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆಸಲಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ, ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ ಠೇವಣಿ, ತರಬೇತಿ ಸೇರಿದಂತೆ ಯಾವುದೇ ಹೆಸರಿನಲ್ಲಿ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ. ಎಂಬುದು ನೆನಪಿರಲಿ, ಬಿಗ್‌ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ ಎಂದು ಕಲರ್ಸ್ ಕನ್ನಡ ಹೇಳಿದೆ.
ಅಂದಹಾಗೆ ಈ ಬಾರಿ ಬಿಗ್‌ಬಾಸ್ ಒಟಿಟಿ ಮತ್ತು ಕಲರ್ಸ್ ಕನ್ನಡ ವಾಹಿನಿ ಎರಡರಲ್ಲೂ ಪ್ರಸಾರವಾಗಲಿದೆ. ಎರಡರಲ್ಲೂ ಕಿಚ್ಚನದೇ ನಿರೂಪಣೆ ಇರಲಿದೆ. ಆಗಸ್ಟ್ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಲಿದ್ದು, 45 ದಿನಗಳ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.