ಬೆಳ್ತಂಗಡಿ : ಬೆಳಾಲು ಗ್ರಾಮದಲ್ಲಿ ಪತ್ತೆಯಾದ ರಸ್ತೆ ದಾಟುತ್ತಿರುವ ಬೃಹತ್ ಆಕಾರದ ಕಾಡುಕೋಣ

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ದೊಂಪದಪಲ್ಕೆ ಪ್ರದೇಶದ ಪಿಜಕ್ಕಲ ಸಮೀಪ ಬೃಹತ್ ಆಕಾರದ ಕಾಡುಕೋಣವೊಂದು ರಸ್ತೆ ಅಡ್ಡ ದಾಟುತ್ತಿರುವುದು ಕಂಡುಬಂದಿದೆ.

 

ನಿನ್ನೆ ಸಂಜೆಯ ವೇಳೆಗೆ ಪಿಜಕ್ಕಲ ಸಮೀಪ ಈ ಘಟನೆ ನಡೆದಿದ್ದು, ಅಲ್ಲಿನ ಸ್ಥಳೀಯರೊಬ್ಬರು ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಬೃಹತ್ ಆಕಾರದ ಕಾಡುಕೋಣ ಪತ್ತೆಯಾಗಿದೆ.

ಕಾಡುಕೋಣ ರಸ್ತೆ ಅಡ್ಡ ದಾಟುವುದು ಕಂಡುಬಂದಿರುತ್ತದೆ. ಇದನ್ನು ನೋಡಿದ ಅವರು ತಕ್ಷಣ ಭಯ ಬೀತರಾಗಿ ವಾಹನವನ್ನು ನಿಧಾನವಾಗಿ ಸಂಚರಿಸಿದ್ದಾರೆ. ಬಳಿಕ, ಈ ದೃಶ್ಯವನ್ನು ಕಣ್ಣಾರ ಕಂಡ ಇವರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.

Leave A Reply

Your email address will not be published.