ವಿಟ್ಲ : ಅಕ್ರಮ ಗೋಸಾಗಾಟ ಪತ್ತೆ

Share the Article

ವಿಟ್ಲ: ಕೇಪು ಕಲ್ಲಂಗಳದಿಂದ ತೋರಣಕಟ್ಟೆ ಸಂಪರ್ಕ ರಸ್ತೆಯ ಒಳ ರಸ್ತೆಯೊಂದರಲ್ಲಿ ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಕಾರಿನ ಹಿಂಭಾಗದಲ್ಲಿ ಎರಡು ಗೋವಿದ್ದು, ಕಾರಿನ ಹಿಂಭಾಗ ಹಾಗೂ ಮುಂಭಾಗದ ಗಾಜು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿಲ್ಲಿದ್ದವರು ಪರಾರಿಯಾಗಿದ್ದಾರೆ.

ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply