ಉಡುಪಿ: ತಾಯಿಯನ್ನು ನಿಂದಿಸಿದ ವ್ಯಕ್ತಿಯ ಬರ್ಬರ ಕೊಲೆ!!

ಉಡುಪಿ: ತಾಯಿಯನ್ನು ನಿಂದಿಸಿದ ಎನ್ನುತ್ತಾ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹೊಡೆದು ಕೊಂದ ಘಟನೆಯೊಂದು ಜಿಲ್ಲೆಯ ಇಂದ್ರಾಳಿ ರೈಲ್ವೇ ಜಂಕ್ಷನ್ ಬಳಿಯಲ್ಲಿ ನಡೆದಿದೆ.

 

ಮೃತನನ್ನು ತಮಿಳುನಾಡು ಮೂಲದ ಕುಮಾರ್(32) ಎಂದು ಗುರುತಿಸಲಾಗಿದ್ದು, ಕೊಲೆಗೈದ ಆರೋಪಿಗಳನ್ನು ನವೀನ್ ಮತ್ತು ಕುಟ್ಟಿ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಬಾರೊಂದರಲ್ಲಿ ಕುಡಿದು ರೈಲ್ವೇ ಜಂಕ್ಷನ್ ರಸ್ತೆಯ ಮೂಲಕ ನಡೆದುಕೊಂಡು ಬರುತ್ತಿದ್ದ ನವೀನ್ ಮತ್ತು ಕುಟ್ಟಿ ಎಂಬವರಿಗೆ ಮೃತ ಕುಮಾರ್ ಎದುರಾಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಯಾವುದೋ ವಿಚಾರದ ಹಿನ್ನೆಲೆಯಲ್ಲಿ ಮೂವರ ಮಧ್ಯೆ ಮಾತು ಬೆಳೆದಿದ್ದು, ಮಾತಿನ ಭರದಲ್ಲಿ ಆರೋಪಿಗಳ ತಾಯಿಗೆ ಕುಮಾರ್ ನಿಂದಿಸಿ, ಅವಾಚ್ಯವಾಗಿ ಬೈದಿದ್ದ. ಇದೇ ವೇಳೆ ಕುಡಿತದ ಅಮಲಿನಲ್ಲಿದ್ದ ಆರೋಪಿಗಳ ಕೋಪದ ಕೈಗೆ ದೊಣ್ಣೆಯೊಂದು ಸಿಕ್ಕಿದ್ದು, ಕುಮಾರ್ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ದೊಣ್ಣೆಯ ಏಟಿಗೆ ಕುಮಾರ್ ನ ತಲೆಗೆ ಗಂಭೀರ ಗಾಯವಾಗಿದ್ದು, ಅಲ್ಲೇ ಕುಸಿದು ಬಿದ್ದ ಪರಿಣಾಮ ವಿಪರೀತ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.