1950 ರಿಂದ 2022 ರವರೆಗಿನ ಭಾರತದ ರಾಷ್ಟ್ರಪತಿಗಳ ಪಟ್ಟಿ ಇಲ್ಲಿದೆ ನೋಡಿ

ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆಯಾಗಿರುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ ಸ್ಥಾನ ಕೂಡಾ ಇವರೇ ಆಗಿರುತ್ತಾರೆ. ರಾಷ್ಟ್ರಪತಿಗಳೂ ಸಂವಿದಾನದ ಮುಖ್ಯಸ್ಥರೂ, ಕಾರ್ಯಾಂಗದ ಮುಖ್ಯಸ್ಥರೂ, ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು, ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗ. ಅಲ್ಲದೆ ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಭಾರತದ ಅಧ್ಯಕ್ಷರಾಗಿರುತ್ತಾರೆ.

ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ದೆಹಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಜುಲೈ 18 ರಂದು ಸಂಸತ್ ಭವನದಲ್ಲಿ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಲ್ಲಿ 4,796 ಸಂಸದರು ಮತ್ತು ಶಾಸಕರಲ್ಲಿ 99%ರಷ್ಟು ಮತದಾನ ನಡೆದಿತ್ತು. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ ಮತ್ತು ಅವರ ಉತ್ತರಾಧಿಕಾರಿ ಜುಲೈ 25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ರ ನಡುವೆ ಪೈಪೋಟಿ ನಡೆಯುತ್ತಿದೆ. ಮುಂದಿನ ರಾಷ್ಟಪತಿ ಯಾರು ಆಗಲಿದ್ದಾರೆ? ಎಂಬ ಕುತೂಹಲದ ನಡುವೆ, 1950 ರಿಂದ 2022 ರವರೆಗಿನ ಭಾರತದ ರಾಷ್ಟ್ರಪತಿಗಳ ವಿವರಗಳಿಗೆ ಒಮ್ಮೆ ಕಣ್ಣಾಡಿಸೋಣ…

ಬಾಬು ರಾಜೇಂದ್ರ ಪ್ರಸಾದ್
ಅಧಿಕಾರ ಅವಧಿ : ಜನವರಿ 26,1950 ರಿಂದ ಮೇ 13,1962
ಜನನ : ಡಿಸೆಂಬರ್ 3 , 1884
ಮರಣ : ಫೆಬ್ರವರಿ 28,1963

ಸರ್ವಪಲ್ಲಿ ರಾಧಾಕೃಷ್ಣನ್
ಜನನ : ಸೆಪ್ಟೆಂಬರ್ 5,1888
ಮರಣ : ಎಪ್ರಿಲ್ 17, 1975
ಅಧಿಕಾರ ಅವಧಿ : ಮೇ 13, 1962 ರಿಂದ ಮೇ 13, 1967

ಝಾಕೀರ್ ಹುಸೇನ್
ಜನನ : ಫೆಬ್ರವರಿ 8, 1897
ಮರಣ : ಮೇ 3, 1969
ಅಧಿಕಾರ ಅವಧಿ : ಮೇ 13,1967 ಇಂದ ಮೇ 3, 1969

ವಿ.ವಿ.ಗಿರಿ ( ಹಂಗಾಮಿ ರಾಷ್ಟ್ರಪತಿ )
ಜನನ : ಆಗಸ್ಟ್ 10,1894
ಮರಣ : ಜೂನ್ 23, 1980
ಅಧಿಕಾರ ಅವಧಿ : ಮೇ 3, 1969 ರಿಂದ 1909 ಜುಲೈ 20, 1969

ಮಹಮ್ಮದ್ ಹಿದಾಯತುಲ್ಲಾ
ಜನನ: ಡಿಸೆಂಬರ್ 17, 1905
ಮರಣ: ಸೆಪ್ಟೆಂಬರ್ 18, 1992
ಅಧಿಕಾರ ಅವಧಿ: ಜುಲೈ 20, 1969 ರಿಂದ ಆಗಸ್ಟ್ 24, 1969

ವಿ.ವಿ.ಗಿರಿ
ಜನನ: ಆಗಸ್ಟ್ 10, 1894
ಮರಣ: ಜೂನ್ 23, 1980
ಅಧಿಕಾರ ಅವಧಿ: ಆಗಸ್ಟ್ 24, 1969 ರಿಂದ ಆಗಸ್ಟ್ 24, 1974

ಫಕ್ರುದ್ದೀನ್ ಅಲಿ ಅಹಮದ್
ಜನನ: ಮೇ 13, 1905
ಮರಣ: ಫೆಬ್ರವರಿ 11, 1977
ಅಧಿಕಾರ ಅವಧಿ: ಆಗಸ್ಟ್ 24, 1974 ರಿಂದ ಫೆಬ್ರವರಿ 11, 1977

ಬಿ.ಡಿ.ಜತ್ತಿ ( ಹಂಗಾಮಿ )
ಜನನ: ಸೆಪ್ಟೆಂಬರ್ 10, 1912
ಮರಣ: ಜೂನ್ 07, 2002
ಅಧಿಕಾರ ಅವಧಿ: ಫೆಬ್ರವರಿ 11 , 1977 ರಿಂದ ಜುಲೈ 25, 1977

ನೀಲಂ ಸಂಜೀವ ರೆಡ್ಡಿ
ಜನನ: ಮೇ 19, 1913
ಮರಣ: ಜೂನ್ 01, 1996
ಅಧಿಕಾರ ಅವಧಿ: ಜುಲೈ 25,1977 ರಿಂದ ಜುಲೈ 25, 1982

ಗ್ಯಾನಿ ಜೈಲ್ ಸಿಂಗ್
ಜನನ: ಮೇ 05, 1916
ಮರಣ: ಡಿಸೆಂಬರ್ 25, 1994
ಅಧಿಕಾರ ಅವಧಿ: ಜುಲೈ 25, 1982 ರಿಂದ ಜುಲೈ 25, 1987

ರಾಮಸ್ವಾಮಿ ವೆಂಕಟರಾಮನ್
ಜನನ: ಡಿಸೆಂಬರ್ 04, 1910
ಮರಣ: ಜನವರಿ 27, 2009
ಅಧಿಕಾರ ಅವಧಿ: ಜುಲೈ 25, 1987 ರಿಂದ ಜುಲೈ 25, 1992

ಶಂಕರ್ ದಯಾಳ್ ಶರ್ಮ
ಜನನ: ಆಗಸ್ಟ್ 19, 1918
ಮರಣ: ಡಿಸೆಂಬರ್ 26, 1999
ಅಧಿಕಾರ ಅವಧಿ: ಜುಲೈ 25, 1992 ರಿಂದ ಜುಲೈ 25, 1997

ಕೆ.ಆರ್.ನಾರಾಯಣನ್
ಜನನ: ಅಕ್ಟೋಬರ್ 27, 1920
ಮರಣ: ನವೆಂಬರ್ 09, 2005
ಅಧಿಕಾರ ಅವಧಿ: ಜುಲೈ 25, 1997 ರಿಂದ ಜುಲೈ 25, 2002

ಎ.ಪಿ.ಜೆ ಅಬ್ದುಲ್‌ ಕಲಾಂ
ಜನನ: ಅಕ್ಟೋಬರ್ 15, 1931
ಮರಣ: ಜುಲೈ 27, 2015
ಅಧಿಕಾರ ಅವಧಿ: ಜುಲೈ 25, 2022 ರಿಂದ ಜುಲೈ 25, 2007

ಪ್ರತಿಬಾ ಪಾಟೀಲ
ಜನನ: ಡಿಸೆಂಬರ್ 13, 1934
ಅಧಿಕಾರ ಅವಧಿ: ಜುಲೈ 25, 2007 ರಿಂದ ಜುಲೈ 25, 2012

ಪ್ರಣಬ್ ಮುಖರ್ಜಿ
ಜನನ: ಡಿಸೆಂಬರ್ 11, 1935
ಮರಣ: ಆಗಸ್ಟ್ 31, 2020
ಅಧಿಕಾರ ಅವಧಿ: ಜುಲೈ 25, 2012 ರಿಂದ ಜುಲೈ 25, 2017

ರಾಮನಾಥ ಕೋವಿಂದ್
ಜನನ: ಅಕ್ಟೋಬರ್ 1 , 1945
ಅಧಿಕಾರ ಅವಧಿ: ಜುಲೈ 25, 2017 ರಿಂದ ಪ್ರಸ್ತುತ.

Leave A Reply

Your email address will not be published.