ಪೈಶಾಚಿಕ ಕೃತ್ಯ | ಹೆಂಡತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಗಂಡ !!!

ಗಂಡನೋರ್ವ ಹೆಂಡತಿಯೆಂದು ನೋಡದೇ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ. 22 ಸೆಕೆಂಡಿನ ಈ ವೀಡಿಯೋ ಕ್ಲಿಪ್ನಲ್ಲಿ ಕುಸುಮಾ ದೇವಿಯ ಪತಿ ಶಾಯಂಬಿಹಾರಿ, ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ತನ್ನ ಹಿಂದೆ ಎಳೆದುಕೊಂಡು ಹೋಗುವುದನ್ನು ತೋರಿಸಲಾಗಿದೆ.

 

ಜುಲೈ 14 ರಂದು ಆಗ್ರಾದ ಸಿಕಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೆನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೇ ದಿನ ವ್ಯಕ್ತಿ ಮತ್ತು ಆತನ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನಿಂದ ಇಬ್ಬರೂ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೋದಲ್ಲಿರುವ ವ್ಯಕ್ತಿಯನ್ನು ಶ್ಯಾಂಬಿಹಾರಿ ಎಂದು ಗುರುತಿಸಲಾಗಿದ್ದು, ಸಂತ್ರಸ್ತೆ ಕುಸುಮಾ ದೇವಿ ಅವರ ಪತಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಜುಲೈ 14 ರಂದು ತನ್ನ ಪತಿ ಮತ್ತು ಅತ್ತೆ ತನ್ನನ್ನು ತೀವ್ರವಾಗಿ ಥಳಿಸಿದರು ಮತ್ತು ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು. ಆದರೆ ನಾನು ಪೊಲೀಸರ ಬಳಿಗೆ ಹೋಗಿ ದೂರು ಕೊಟ್ಟಿದ್ದಕ್ಕೆ ನನ್ನ ಪತಿ ನನ್ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಹೆಂಡತಿ ಕುಸುಮಾ ದೇವಿ ಹೇಳಿದ್ದಾಳೆ. ಈ ಘಟನೆಯ ವೀಡಿಯೊವನ್ನು ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಸ್ವಇಚ್ಛೆಯಿಂದ ನೋವುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು), 342 (ಅಕ್ರಮ ಬಂಧನ) ಮತ್ತು 354 (ಮಹಿಳೆಯ ವಿನಯವನ್ನು ಕೆರಳಿಸುವುದು) ಅಡಿಯಲ್ಲಿ ಶ್ಯಾಮ್ಬಿಹಾರಿ ಮತ್ತು ಅವರ ತಾಯಿ ಬರ್ಫಾ ದೇವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.