ಆರತಕ್ಷತೆ ವೇಳೆ ಕುಸಿದು ಬಿದ್ದು ವರ ಸಾವು!

ಮದುವೆಯೆಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಕ್ಷಣ. ನೂರಾರು ಜನುಮಗಳಿಗೂ ನೆನಪಿರುವಂತಹ ಈ ದಿನವು, ಇಲ್ಲೊಂದು ಜೋಡಿಗೆ ಎಂದೂ ನೆನಪಿಸಿದ ದಿನವಾಗಿದೆ. ಹೌದು. ತನ್ನ ಮದುವೆಯ ಸುಂದರ ಕ್ಷಣಗಳನ್ನು ಆನಂದಿಸುತ್ತಾ ಇದ್ದ ಮದುಮಗನಿಗೆ, ಆರತಕ್ಷತೆ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದಂತಹ ಘಟನೆ ನಡೆದಿದೆ.

 

ಮೃತ ದುರ್ದೈವಿ ಹೊನ್ನೂರ ಸ್ವಾಮಿ(26).

ಬುಧವಾರ ಸಂಜೆ ಹೊನ್ನೂರ ಸ್ವಾಮಿ ಅವರ ಮದುವೆ ಆರತಕ್ಷತೆ ನಡೆಯುತ್ತಿತ್ತು. ಈ ವೇಳೆ ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥಗೊಂಡ ಹೊನ್ನೂರ ಸ್ವಾಮಿಯನ್ನು, ಕೂಡಲೇ ಸಮೀಪದ ಖಾಸಗಿ ಕ್ಲಿನಿಕ್​ಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮದುಮಗ ಕೊನೆಯುಸಿರೆಳೆದಿದ್ದಾನೆ.

ಆರತಕ್ಷತೆ ವೇಳೆಯೇ ಮದುಮಗ ಹೃದಯಾಘಾತದಿಂದ ಮೃತಪಟ್ಟಿದ್ದು, ಮದುವೆಯಲ್ಲಿ ಸೂತಕ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮದುಮಗಳು ಆಘಾತಕ್ಕೀಡಾಗಿದ್ದಾಳೆ. ಇಂತಹ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

Leave A Reply

Your email address will not be published.