ದ್ವಿಗುಣ ಮತಗಳ ಅಂತರದಿಂದ ಶಿಖರ ಏರಿ ನಿಂತ ನಮ್ಮ ಹೆಮ್ಮೆಯ ಆದಿವಾಸಿ ಅಮ್ಮ ದ್ರೌಪದಿ ಮುರ್ಮ
ರಾಷ್ಟ್ರಪತಿ ಚುನಾವಣೆ ಸೋಮವಾರ ನಡೆದಿದ್ದು, ಎನ್‌ಡಿಎ ಅಭ್ಯರ್ಥಿ ದೌಪದಿ ಮುರ್ಮು ಅವರು ಭರ್ಜರಿ ಗೆಲುವು ಕಂಡಿದ್ದಾರೆ.
ಇಂದು ಬೆಳಿಗ್ಗೆ 11 ಕ್ಕೆ ಸಂಸತ್ ಭವನದ 63ನೇ ಕೊಠಡಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಿ.ಸಿ ಮೋದಿ ಅವರು ಮತ ಎಣಿಕೆ ಪ್ರಕ್ರಿಯೆ ಮಾಡಿದ್ದರು.
ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ದೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು ಕಣದಲ್ಲಿದ್ದರು.
ಯಾರಿಗೆ ಎಷ್ಟೆಷ್ಟು ಮತ?
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆದಿದ್ದು ಇಂದು(ಗುರುವಾರ) ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ನಡೆದಿದೆ. ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ಮುರ್ಮ ಮುನ್ನಡೆ ಸಾಧಿಸಿದ್ದರು. ಮುರ್ಮ ಅವರಿಗೆ 540 ಮತಗಳು ಲಭಿಸಿದ್ದು ಒಟ್ಟು ಮತದ ಮೌಲ್ಯ 3,78,000 ಆಗಿದೆ. ಅದೇ ವೇಳೆ ಯಶವಂತ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ. 2ನೇ ಸುತ್ತಿನಲ್ಲೂ ದೌಪದಿ ಮುರ್ಮುಗೆ 1,349 ಮತಗಳು ಲಭಿಸಿದ್ದು, ಮೌಲ್ಯ 4,83,299 ಆಗಿದೆ. ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ 537 ಮತಗಳು ಲಭಿಸಿದ್ದು ಮತಗಳ ಮೌಲ್ಯ 1,89,876 ಆಗಿದೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ದೌಪದಿ ಮುರ್ಮುಗೆ 1,349 ಮತಗಳು ಲಭಿಸಿದ್ದು ಮತಗಳ ಮೌಲ್ಯ 4,83,299 ಆಗಿದೆ. ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ 537 ಮತಗಳು ಲಭಿಸಿದ್ದು ಯಶವಂತ ಸಿನ್ಹಾ ಪಡೆದ ಮತಗಳ ಮೌಲ್ಯ 1,89,876 ಆಗಿದೆ. ಮೂರು ಸುತ್ತಿನ ಮತ ಎಣಿಕೆ ನಂತರ ದೌಪದಿ ಮುರ್ಮು ಪಡೆದ ಮತಗಳ ಮೌಲ್ಯ 5,77,777 ಆಗಿದ್ದುಯಶವಂತ ಸಿನ್ಹಾ ಪಡೆದ ಮತಗಳ ಮೌಲ್ಯ 2,61,062 ಆಗಿದೆ.
ದೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.
ನೋವಲ್ಲೇ ಅರಳಿದ ಕಮಲ ದ್ರೌಪದಿ ಮುರ್ಮ
ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್
ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.
64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಬ್ರೌಪದಿ ಮುರ್ಮು ಜಾರ್ಖಂಡ್‌ನ ಒಂಬತ್ತನೇ ಗವರ್ನರ್ ಆಗಿದ್ದ ಭಾರತೀಯ ರಾಜಕಾರಣಿ. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ.
1997 ರಲ್ಲಿ, ಅವರು ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಮೊದಲ ಬಾರಿಗೆ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಜಯ ಕಂಡಿದ್ದರು. 2000ರಲ್ಲಿ ಶಾಸಕ ಸ್ಥಾನದ ಟಿಕೆಟ್ ಪಡೆದು ಅದರಲ್ಲೂ ಗೆಲುವು ಕಂಡ ಮಂತ್ರಿಯೂ ಆಗಿದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗ್ರಾಮಕ್ಕೆ ಮರಳಿದ ದೌಪದಿ ಮುರ್ಮು ಅವರಿಗೆ ಅದಕ್ಕಿಂತ ದೊಡ್ಡ ಶಾಕ್ ಕಾದಿತ್ತು. ಹಿರಿಯ ಮಗ ಅಫಘಾತದಲ್ಲಿ ಸಾವು ಕಂಡ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದ ಅವರು. 2013ರಲ್ಲಿ ತಮ್ಮ 2ನೇ ಮಗನನ್ನೂ ಅಪಘಾತದಲ್ಲಿ ಕಳೆದುಕೊಂಡರು. ಇದರ ಬೆನ್ನಲ್ಲಿಯೇ 2014ರಲ್ಲಿ ಪತಿಯ ಸಾವನ್ನೂ ನೋಡಿದರು. ಸಂಪೂರ್ಣ ಕುಸಿದು ಹೋಗಿದ್ದ ದೌಪದಿ ಮುರ್ಮು ಬಳಿಕ ಸಮಾಜಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದರು.
ದೌಪದಿ ಮುರ್ಮು ಅವರು ಓಡಿಶಾ ಮೂಲದವರು. 1958, ಜೂನ್ 20ರಂದು ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಸಮುದಾಯದ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಮತ್ತು ಅಜ್ಜ ಪಂಚಾಯತ್ ರಾಜ್ ಯೋಜನೆಯಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು.
ದೌಪದಿ ಮುರ್ಮು ವಿದ್ಯಾಭ್ಯಾಸ
ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ. ಇವರು ಪದವಿ ನಂತರ ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರ ಪತಿ ಶ್ಯಾಮ್ ಚರಣ್ ಮುರ್ಮು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರದೃಷ್ಟವಶಾತ್ ಇಬ್ಬರೂ ಮೃತಪಟ್ಟಿದ್ದಾರೆ. ಬಳಿಕ ಪತಿಯನ್ನೂ ಕಳೆದುಕೊಂಡ ಇವರು. ಇದೀಗ ಪುತ್ರಿ ಜೊತೆ ವಾಸಿಸುತ್ತಿದ್ದಾರೆ.