ನಡೆದು ಹೋದ ಕನ್ಯತ್ವ ಪರೀಕ್ಷೆ, ಪಾಸಾದವರಿಗೆ ಗಂಧದ ತಿಲಕ ಮತ್ತು ಸರ್ಟಿಫಿಕೇಟ್ । ಖುಷಿಯಿಂದ ಫೋಟೋ ಹಂಚಿಕೊಂಡ ಕನ್ಯೆಯರು !
ಡರ್ಬನ್ (ದಕ್ಷಿಣ ಆಫ್ರಿಕಾ): ಯುವತಿಯರು ಕನೈಯರಾಗಿಯೇ ಉಳಿದಿದ್ದಾರೋ ಅಥವಾ ಇಲ್ಲವೋ ಎಂದು ನೋಡುವ ಸಲುವಾಗಿ ಕನ್ಯತ್ವ ಪರೀಕ್ಷೆ ನಡೆಯುತ್ತಿದ್ದು, ಇದೀಗ ಈ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಯುವತಿಯರ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನಂತರ ಕನ್ಯತ್ವ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ.
ಕೆಲವೊಂದು ಯುವತಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಲ್ಗೊಂಡು ತೇರ್ಗಡೆಯಾಗಿರುವ ಕುರಿತು ಖುಷಿಯಿಂದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಲವರು ಇದನ್ನು ನೋಡಿ ಕೆಲವರು ಶಾಕ್ ಆಗಿದ್ದಾರೆ. ಮತ್ತೆ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.
ಇದರ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಡರ್ಬನ್‌ನಲ್ಲಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ. ಇದು ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ಚರ್ಚ್ ಆಗಿದ್ದು, ಇದನ್ನು 1910 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಇತ್ತೀಚೆಗೆ ನಡೆಸಲಾಗಿತ್ತು ಕನ್ಯತ್ವ ಪರೀಕ್ಷೆಯನ್ನು. ವಿಶೇಷವೆಂದರೆ ಹುಡುಗಿಯರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಯುವತಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಲ್ಗೊಂಡು ತೇರ್ಗಡೆಯಾದ ಖುಷಿಯಿಂದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವತಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಹುಡುಗಿಯರು ಅಥವಾ ಯುವತಿಯರಿಗೆ ‘ಕನ್ಯತಾ ಪ್ರಮಾಣ ಪತ್ರ ‘ ನೀಡಿ, ಅವರ ಹಣೆಯ ಮೇಲೆ ಅವರು ‘ಪರಿಶುದ್ಧರು’ ಎಂದು ಸೂಚಿಸಲು ಬಿಳಿ ಗಂಧದ ತಿಲಕ ಹಚ್ಚಲಾಗಿದೆ. ಪರೀಕ್ಷೆ ಪಾಸಾದ ಹುಡುಗಿಯರ ಮುಖದಲ್ಲಿ ಖುಷಿ, ತಿಲಕದ ಜತೆ ಎದ್ದು ಕಾಣುತ್ತಿದೆ.
ಈ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಈ ಕನ್ಯತ್ವ ಪರೀಕ್ಷೆಯ ವಿಷಯ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕನ್ಯತ್ವದ ಹೆಸರಿನಲ್ಲಿ ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ, ಇದು ನಾಚಿಕೆಗೇಡಿನ ವಿಷಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ಕಾರಣ ಕೇಳಿದಾಗ, ಚರ್ಚ್ ಮುಖಂಡರು ಹೇಳಿದ್ದು ಏನೆಂದರೆ, ಇದನ್ನು ಪ್ರತಿವರ್ಷವೂ ನಡೆಸಲಾಗುತ್ತದೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸುವ ಪ್ರಯತ್ನ ಇದು ಎಂದಿದ್ದಾರೆ! ಮಹಿಳೆಯರಿಗೆ ಮಾತ್ರ ಈ ಪರೀಕ್ಷೆ ಏಕೆ, ಪುರುಷರು ಪರಿಶುದ್ಧರಾಗಿ ಇಲ್ಲದಿದ್ದರೂ ನಡೆಯುತ್ತದೆಯೇ ಎಂದು ಇನ್ನಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.