ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ದುರ್ಘಟನೆ!! ಸೆಲ್ಫೀ ಹುಚ್ಚಿಗೆ ಯುವತಿ ಬಲಿ!!

ಗೆಳೆಯರೊಂದಿಗೆ ಊಟಿಗೆ ಬಂದಿದ್ದ 26 ವರ್ಷದ ಯುವತಿಯೋರ್ವಳು ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆಯೊಂದು ತಮಿಳುನಾಡಿನ ನೀಲಗಿರಿಯ ಸಿಗುರಹಳ್ಳಿ ನದಿ ದಡದಲ್ಲಿ ನಡೆದಿದೆ.

 

ಮೃತಳನ್ನು ಬೆಂಗಳೂರಿನ ಐಟಿ ಉದ್ಯೋಗಿ ಎಂದು ಗುರುತಿಸಲಾಗಿದ್ದು,ತನ್ನ ಸಹೋದ್ಯೋಗಿಗಳೊಂದಿಗೆ ಊಟಿಗೆ ಬಂದಿದ್ದಳು ಎನ್ನಲಾಗಿದೆ.

ಇಲ್ಲಿನ ಕಲ್ ಹಟ್ಟಿ ಇಳಿಜಾರು ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ಬಳಿಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಮೃತದೇಹವನ್ನು ಪತ್ತೆಮಾಡಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದೂ, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ನಡೆಸುವ ಹುಚ್ಚಾಟಕ್ಕೆ ಜೀವಗಳು ಬಲಿಯಾಗುತ್ತಿವೆ.

Leave A Reply

Your email address will not be published.