SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ | ಇಂದು ಮಧ್ಯಾಹ್ನ ವೆಬ್ಸೈಟ್ ನಲ್ಲಿ ಲಭ್ಯ

ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಪ್ರಕಟಗೊಂಡಿದೆ. ವಿದ್ಯಾರ್ಥಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ https://karresults.nic.in/ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

2022ರ ಜೂನ್ 27ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದು ಸಚಿವರು ಮಾಹಿತಿ ನೀಡಿದರು.

ಇಂದು ಮಧ್ಯಾಹ್ನ 12 ಗಂಟೆ ನಂತರ ಈ ವೆಬ್‌ಸೈಟ್‌ನಲ್ಲಿ
( https://karresults.nic.in/ ) ಫಲಿತಾಂಶ ವೀಕ್ಷಿಸಬಹುದು.

ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ.

ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ದಿನಾಂಕ 21 07-2022 ರಂದು ಮಧ್ಯಾಹ್ನ 12.00 ಗಂಟೆಯ ನಂತರ ಎಸ್.ಎಂ.ಎಸ್ ಮೂಲಕ ರವಾನಿಸಲಾಗುತ್ತದೆ.

ಶಾಲೆಗಳ ಕ್ರೋಡೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು https://sslc.karnataka.gov.in ಜಾಲತಾಣದಲ್ಲಿ ಲಾಗಿನ್ ಆಗುವ ಮೂಲಕ ದಿನಾಂಕ 21-07-2022 ರಂದು ಮಧ್ಯಾಹ್ನ 1.00 ಗಂಟೆಯ ನಂತರ ನೀಡಲಾಗುವುದು, ಶಾಲಾ ಹಂತದಲ್ಲಿ ಅಂಕ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

error: Content is protected !!
Scroll to Top
%d bloggers like this: