” 40 ಸೀಟ್ ಗೆದ್ದೋರಿಗೆ ಅಷ್ಟು ಆಸೆ ಇರಬೇಕಾದರೇ, 80 ಸೀಟ್ ಗೆದ್ದವರಿಗೆ ಇನ್ನೆಷ್ಟು ಆಸೆ ಇರಬೇಡ ? ”- ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದ್ದಾರೆ ?!
ಚಾಮರಾಜನಗರ: ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷದೊಂದಿಗಿದೆ. ಈ ಬಾರಿಯೂ ಕಾಂಗ್ರೆಸ್ಗೆ ಅಧಿಕಾರವಿಲ್ಲ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ‘ಅವರು ಗೆದ್ದದ್ದು 40 ಸೀಟ್. 40 ಸೀಟ್ ಗೆದ್ದೋರಿಗೆ ಅಷ್ಟು ಆಸೆ ಇರಬೇಕಾದರೇ, 80 ಸೀಟ್ ಗೆದ್ದವರಿಗೆ ಇನ್ನೆಷ್ಟು ಆಸೆ ಇರಬೇಡ ?’ ಎಂದು ಕೊನೆಗೆ ಅವರಿಗೆ ಒಳ್ಳೆಯದಾಗಲಿ ಎಂದು ಟೀಕಿಸಿದದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಸಿಎಂ ಆಗುವ ಆಸೆ ಇತ್ತೀಚೆಗೆ ಉತ್ಕಟವಾಗಿದೆಯಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಇತಿಹಾಸ ಗೊತ್ತಾ, ನಾನು ಎಷ್ಟು ಸೀನಿಯರ್ ಇದೀನಿ ಗೊತ್ತಾ, ನಾನು ಯಾರ ವಿರುದ್ಧ ಗೆದ್ದಿದ್ದೀನಿ – ಸೋತಿದ್ದೀನಿ ಗೊತ್ತಾ. ನಾನು ಸೀನಿಯರ್ ಇದೀನಿ, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗಿದ್ದೀನಿ. ನನ್ನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕೆಂಬುದು ನನ್ನ ಅಜೆಂಡಾ ಎನ್ನುವ ಮೂಲಕ ಸಿಎಂ ಆಗುವ ಆಸೆ ಪರೋಕ್ಷವಾಗಿ ಹೊರಹಾಕಿದರು.
40 ಸೀಟ್ ಗೆದ್ದೋರಿಗೆ ಆಸೆ ಇರಬೇಕಾದರೇ 80 ಸೀಟ್ ಗೆದ್ದೋರಿಗೆ ಇನ್ನಷ್ಟು ಆಸೆ ಇರಬೇಕು ?
ಭ್ರಷ್ಟಾಚಾರದ ರಾಜಧಾನಿ: ಕರ್ನಾಟಕ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ 40ರಷ್ಟರ ಹೊರತಾಗಿಯೂ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದ ಗೌರವವನ್ನು ಉಳಿಸುವ ಕಾರ್ಯ ಆಗಬೇಕಿದೆ. ಜನರಿಗೆ ಈ ವಿಚಾರ ಮುಟ್ಟಿಸುತ್ತೇವೆ ಎಂದು ಡಿಕೆಶಿ ಇದೇ ವೇಳೆ ಗುಡುಗಿದರು.