ಒಳ ತೊಡೆಗಳ ಕಪ್ಪು ಬಣ್ಣ ನಿವಾರಿಸಲು ಕೆಲವೊಂದು ಸಿಂಪಲ್ ಐಡಿಯ !!!
ಹೆಣ್ಣುಮಕ್ಕಳು ಸಾಮಾನ್ಯವಾಗಿ ತಮ್ಮ ದೇಹದ ಎಲ್ಲಾ ಅಂಗಾಂಗಗಳು ಸುಂದರವಾಗಿರಬೇಕೆಂದು ಬಯಸುತ್ತಾರೆ. ಯಾವುದೇ ಭಾಗ ಸ್ವಲ್ಪ ಎಡವಟ್ಟಾದರೂ ಸಹಿಸಲು ಆಗುವುದಿಲ್ಲ ಅಲ್ಲವೇ?.
ಸೌಂದರ್ಯ ಎಂದರೆ ಕೇವಲ ಮುಖ ಮಾತ್ರ ಅಲ್ಲ, ದೇಹದ ಎಲ್ಲಾ ಭಾಗಗಳೂ ಮುಖ್ಯ. ಸಾಮಾನ್ಯವಾಗಿ ಎಲ್ಲರೂ ಮುಖ, ಕೈ, ಅಂಡರ್ ಆರ್ಮ್, ಪಾದ, ಇತ್ಯಾದಿ ತೆರೆದ ದೇಹದ ಭಾಗಗಳ ಶುಚಿತ್ವ ಕಡೆ ಹೆಚ್ಚು ಗಮನ ಕೊಡುತ್ತೇವೆ. ಅದೇ ಮುಚ್ಚಿದ ಭಾಗಗಳ ಶುಚಿತ್ವದ ಬಗ್ಗೆ ಹೆಚ್ಚಾಗಿ ಗಮನ ಕೊಡಲು ಹೋಗೋದಿಲ್ಲ.
ನಾವಿಂದು ತೊಡೆಯ ಭಾಗದ ಶುಚಿತ್ವದ ಬಗ್ಗೆ ತಿಳಿಯೋಣ. ಕೆಲವರು ಶಾರ್ಟ್ಸ್ ಧರಿಸಲು ಹೊರಟರೆ ಕಪ್ಪು ತೊಡೆಯ ಕಾರಣದಿಂದ ಹಿಂಜರಿಯುತ್ತಾರೆ. ಆದ್ದರಿಂದ ತೊಡೆಯ ಶುಚಿತ್ವದ ಬಗ್ಗೆಯೂ ಗಮನ ಹರಿಸಲು ಪ್ರಯತ್ನಿಸಿದರೆ ಈ ಕಲೆಗಳನ್ನು ತೊಡೆದು ಹಾಕಬಹುದು. ತೊಡೆಯ ಕ್ಲೀನಿಂಗ್ ಮತ್ತು ಕಪ್ಪನ್ನು ತೆಗೆದುಹಾಕಲು ವಿವಿಧ ಮನೆ ಮದ್ದುಗಳನ್ನು ಇಲ್ಲಿ ಹೇಳಲಾಗಿದೆ.
ಒಳ ತೊಡೆಯ ಮೇಲಿನ ಚರ್ಮ ಕಪ್ಪಗಾಗಲು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ಪ್ರಖರವಾದ ಸೂರ್ಯನ ಕಿರಣಗಳಿಂದ, ಒಣ ಚರ್ಮ, ಕೆಲವು ಔಷಧಿಗಳು, ಬಿಗಿಯಾದ ಬಟ್ಟೆಯ ಘರ್ಷಣೆ, ಅಕಾಂಥೋಸಿಸ್ ನಿಗ್ರಿಕನ್ಸ್ (ಚರ್ಮದ ವರ್ಣದ್ರವ್ಯ ಅಸ್ವಸ್ಥತೆ) ಮತ್ತು ಡಯಾಬಿಟಿಸ್ ಮೆಲ್ಲಿಟಸ್ ಕೂಡ ನಿಮ್ಮ ತೊಡೆಯ ಮೇಲಿನ ಚರ್ಮ ಕಪ್ಪಾಗಲು ಕಾರಣವಾಗುತ್ತದೆ. ಆದರೆ ಇದಕ್ಕೆ ಕೆಲವು ಮನೆ ಮದ್ದುಗಳಿದ್ದು, ಅದನ್ನು ನೀವು ಒಳ ತೊಡೆಯ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಕಪ್ಪಾಗುವುದನ್ನು ತಡೆಯಬಹುದು.
ದೇಹದ ಇತರ ಎಲ್ಲಾ ಭಾಗಗಳಂತೆ ತೊಡೆಯ ಭಾಗ ಸಹ ತಿಳಿ ಬಣ್ಣದಲ್ಲಿದ್ದರೆ ಉತ್ತಮ. ಒಂದು ವೇಳೆ ಡಾರ್ಕ್ ಆಗಿದ್ದರೆ ಮಿನಿ ಸ್ಕರ್ಟ್ ಶಾರ್ಟ್ಸ್ ಧರಿಸಲು ಸಾಧ್ಯವಿರೋದಿಲ್ಲ. ಒಂದು ವೇಳೆ ನಿಮ್ಮ ತೊಡೆ ಕಪ್ಪಾಗಿದ್ದರೆ ನೀವು ಏನು ಮಾಡಬೇಕು? ಕೆಲವೊಂದು ಟಿಪ್ಸ್ ಇಲ್ಲಿದೆ.
ತೊಡೆ ಅಥವಾ ಥಾಯ್ ನ ಕಪ್ಪನ್ನು ತೆಗೆದುಹಾಕಲು ನಿಂಬೆ ಮತ್ತು ಕೊಬ್ಬರಿ ಎಣ್ಣೆ ಉಪಯುಕ್ತ. ಇದನ್ನು ಬಳಸಲು 2 ಟೀಸ್ಪೂನ್ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ಇದರಲ್ಲಿ ಅರ್ಧ ಟೀಚಮಚ ನಿಂಬೆಹಣ್ಣನ್ನು ಮಿಶ್ರಣ ಮಾಡಿ. ಇವೆರಡು ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿ. ಈ ಮಿಶ್ರಣವನ್ನು ನಿಮ್ಮ ತೊಡೆಯ ಮೇಲೆ ಹಚ್ಚಿಕೊಳ್ಳಿ ಮತ್ತು ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಇದು ತೊಡೆಯ ಉತ್ತಮ ಶುಚಿತ್ವಕ್ಕೆ ಕಾರಣವಾಗುತ್ತೆ. ಜೊತೆಗೆ ತೊಡೆಯ ಕಪ್ಪು ಬಣ್ಣ ಸಹ ಮಾಸಿ ಹೋಗುತ್ತದೆ.
ತೊಡೆಯನ್ನು ಸ್ವಚ್ಛಗೊಳಿಸಲು ಸಕ್ಕರೆ ಮತ್ತು ನಿಂಬೆಯನ್ನು ಬಳಸಿ. ಇದನ್ನು ಬಳಸಲು, 2 ಟೀಸ್ಪೂನ್ ಸಕ್ಕರೆಯಲ್ಲಿ 1 ಟೀಸ್ಪೂನ್ ನಿಂಬೆಯನ್ನು ಮಿಶ್ರಣ ಮಾಡಿ.
ಸಕ್ಕರೆ ಮತ್ತು ನಿಂಬೆ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದನ್ನು ನಿಮ್ಮ ತೊಡೆಗೆ ಹಚ್ಚಿ. ಇದು ತೊಡೆಯ ಕಪ್ಪನ್ನು ಹೋಗಲಾಡಿಸಿ ಹೊಳೆಯುವ ತ್ವಚೆ ನೀಡುವಲ್ಲಿ ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ವಾರಕ್ಕೆ ಎರಡು ಬಾರಿಯಾದರೂ ಟ್ರೈ ಮಾಡಬಹುದು.
ತೊಡೆಯ ಮೇಲಿರುವ ಕೊಳೆಯನ್ನು ಕ್ಲೀನ್ ಮಾಡಲು ಮೊಸರು ಮತ್ತು ಓಟ್ ಮೀಲ್ ಸಾಕಷ್ಟು ಪ್ರಯೋಜನಕಾರಿ. ಮೊಸರು ಅತ್ಯುತ್ತಮ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಬಳಸಲು ಮೊಸರು ಮತ್ತು ಓಟ್ ಮೀಲ್ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ತೊಡೆಯ ಭಾಗಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದು ತೊಡೆಯನ್ನು ಆಳವಾಗಿ ಸ್ವಚ್ಛಗೊಳಿಸುವ ಮೂಲಕ ತೊಡೆಯ ಕಪ್ಪನ್ನು ತೆಗೆದುಹಾಕುತ್ತೆ.
ಒಳಗಿನ ತೊಡೆಗಳಲ್ಲಿ ಹೆಚ್ಚಾಗಿ ಬೊಜ್ಜು ಉಂಟಾಗಿರುತ್ತದೆ. ಆದರೆ ಆಪಲ್ ಸೈಡರ್ ವಿನೆಗರ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಮತ್ತು ಸ್ಕೂಲಕಾಯತೆಯನ್ನು ಕಳೆದುಕೊಳ್ಳಬಹುದು. ಆದ್ದರಿಂದ ನೀವು ಸಾವಯವ ಆಪಲ್ ಸೈಡರ್ ವಿನೆಗರ್ 2 ಚಮಚ, 1 ಚಮಚ ನೀರು, ಹತ್ತಿಯ ಉಂಡೆಗಳನ್ನು ತೆಗೆದಿಟ್ಟುಕೊಳ್ಳಿ. ನಂತರ ಒಂದು ಚಮಚ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಹತ್ತಿ ಚೆಂಡನ್ನು ಈ ಮಿಶ್ರಣದಲ್ಲಿ ಅದ್ದಿ. ಕಪ್ಪಾಗಿರುವ ಜಾಗದಲ್ಲಿ ಇದನ್ನು ಹಚ್ಚಿ, 15-20 ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ. ನೀವು ಇದನ್ನು ಪ್ರತಿದಿನ ಒಮ್ಮೆ ಮಾಡಬಹುದು.
ಚರ್ಮದ ಮೇಲಿನ ಯಾವುದೇ ಕಪ್ಪು ಕಲೆಗಳನ್ನು ತೆಗೆಯಲು ಇದು ಹಳೆಯ ಸಾಂಪ್ರದಾಯಿಕ ಪರಿಹಾರ ಆಲೂಗಡ್ಡೆ. ಆಲೂಗಡ್ಡೆಯಲ್ಲಿರುವ ಕಿಣ್ವವಾದ ಕ್ಯಾಟೆಕೋಲೇಸ್ ಒಳ ತೊಡೆಯ ಮೇಲೆ ಚರ್ಮ ಕಪ್ಪಗಾಗಿರುವುದನ್ನು ತೆಗೆಯುತ್ತದೆ. ಆದ್ದರಿಂದ ನೀವು ಆಲೂಗಡ್ಡೆ ತುಂಡು ತೆಗೆದುಕೊಂಡು ಕಪ್ಪಾದ ಜಾಗದ ಮೇಲೆ 15 ನಿಮಿಷಗಳ ಕಾಲ ಉಜ್ಜಿಕೊಳ್ಳಿ. ಬಹಳ ಬೇಗ ಉತ್ತಮ ಫಲಿತಾಂಶ ಕಂಡುಕೊಳ್ಳುವಿರಿ.
ಇನ್ನು ನೀವು ಹಿಂಜರಿಯದೆ ಯಾವುದೇ ಮಿನಿ ಡ್ರೆಸ್ ಧರಿಸಬಹುದು. ಫುಲ್ ಕಾನ್ಸಿಡೆನ್ಸ್ ನಲ್ಲಿ ಯಾವುದೇ ಸ್ಕರ್ಟ್, ಮಿನಿಸ್ಕರ್ಟ್ ಹಾಕಿ ಪ್ರಯಾ ಬೆಳೆಸಬಹುದು.