ತಪ್ಪುಆದೇಶದ ನಂತರ ಸರಕಾರದಿಂದ ಮತ್ತೊಂದು ಎಡವಟ್ಟು| ದಸರಾ ಆರಂಭದಲ್ಲೇ ಈ ರೀತಿನಾ!!!

ಬೆಂಗಳೂರು:ಈಗಾಗಲೇ ಕನ್ನಡದಲ್ಲಿ ತಪ್ಪಾಗಿ ಆದೇಶವನ್ನು ಹೊರಡಿಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿದೆ ಮತ್ತೆ ಸಾರ್ವಜನಿಕರು ಇದನ್ನು ಟೀಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಈ ರೀತಿಯಲ್ಲಿ ತಪ್ಪು ತಪ್ಪಾಗಿ ವ್ಯಾಕರಣ ಮಾಡಿದ್ದಲ್ಲಿ ಇನ್ನು ಉಳಿದವರು ಹೇಗೆ?

2022ನೇ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಕುರಿತು ಜುಲೈ 19 ರಂದು ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆದಿತ್ತು.ಈ ಕುರಿತು ಕಾರ್ಯಸೂಚಿಯ ಕಿರುಪುಸ್ತಕದ ಮುಖಪುಟದಲ್ಲಿ ಇಸವಿಯನ್ನು ತಪ್ಪಾಗಿ ಬರೆಯಲಾಗಿದೆ.

ಈ ಕುರಿತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಗಮನ ಸೆಳೆದಿದ್ದಲ್ಲದೆ, ಸರ್ಕಾರದ ವಿರುದ್ಧ ಟೀಕೆಯನ್ನೂ ಮಾಡಿದ್ದಾರೆ. ‘ರಾಜ್ಯದ ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ, ‘ಟೇಕ್ ಆಪ್’ ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ಫೆಸ್ಬುಕ್ ನಲ್ಲಿ ಬಹಳಷ್ಟು ಜನ ಈ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಸರಕಾರ ಇನ್ನೂ ನಿದ್ರೆಯಲ್ಲಿದೆಯೇ ಕನ್ನಡವೇ ಗೊತ್ತಿಲ್ಲದ ಅಧಿಕಾರಿಗಳಿಂದ ಇಂತಹ ಎಡವಟ್ಟು ಸಂಭವಿಸುತ್ತಿವೆ. ಅಂತವರಿಗೆ ಮೊದಲು ಕನ್ನಡ ಕಳಿಸಿ ಕೊಡಿ, ಇಲ್ಲವಾದರೆ ಕನ್ನಡ ಗೊತ್ತಿರುವ ಅಧಿಕಾರಿಯನ್ನು ಆಯ್ಕೆ ಮಾಡಿ.ಇಲ್ಲವಾದಲ್ಲಿ ಕನ್ನಡದ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ ಎಂದಿದ್ದಾರೆ.

ಆದರೆ ಈ ರೀತಿಯಲ್ಲಿ ಸರಕಾರ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿದೆ. ಎಲ್ಲವನ್ನೂ ತರಾತುರಿಯಲ್ಲಿ ಮಾಡಿಕೊಳ್ಳುತ್ತಿರುವ ಕಾರಣ ಇಂತಹ ಎಡವಟ್ಟುಗಳು ನಡೆಯುತ್ತಿವೆ. ಸರಕಾರ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ. ಅಂದರೆ 2022ರ ಬದಲು 2021 ಎಂದು ನಮೂದಿಸಲಾಗಿದೆ. ಈ ಮೂಲಕ ಸರ್ಕಾರ ಹಳೆಯ ಕಾರ್ಯಸೂಚಿಯನ್ನೇ ಹೊಸದಾಗಿ ಮುದ್ರಿಸಿ ಎಡವಟ್ಟು ಮಾಡಿಕೊಂಡಿತೇ? ಎಂಬ ಅನುಮಾನ ಮೂಡಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

Leave A Reply

Your email address will not be published.