ವಿಟ್ಲ : ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಸರ್ವೆಯ ದಂಪತಿಯ ಬಂಧನ

ಪುತ್ತೂರು : ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ವಿಟ್ಲ ಮುನ್ನೂರು ಗ್ರಾಮದ ದಂಬೆತಾರು ಎಂಬಲ್ಲಿ ನಡೆದಿದೆ.

 

ಬಂಧಿತರನ್ನು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಪ್ರಮೋದ್ ಹಾಗೂ ಪತ್ನಿ ಸುಮತಿ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ವಿನಯ ಚಂದ್ರನಾಯಕ್ ಎಂಬವರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರಿಗೆ, ವಿನಯ ಚಂದ್ರನಾಯಕ್ ರವರ ಮನೆಯಲ್ಲಿ ಕೂಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಆಕೆಯ ಪತಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಬಂಧಿಸಿ ವಿನಯ ಚಂದ್ರನಾಯಕ್ ರವರ ಮನೆಯ ಬೆಡ್ ರೂಮಿನ ಕಪಾಟಿನಿಂದ ಕಳವಾಗಿದ್ದ ಒಂದು ಚಿನ್ನದ ಬ್ರಾಸ್ ಲೈಟ್, ಚಿನ್ನದ ಲಕ್ಷ್ಮೀ ಚೈನ್-1, ಚಿನ್ನದ ಪದಕ ಸಹಿತ ಚೈನು1, ಚಿನ್ನದ ಲಕ್ಷ್ಮೀ ಪದಕ ಸಹಿತ ಚೈನ್-01, ಚಿನ್ನದ ಉಂಗುರಗಳು -03 (Total- 98Gram) ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ, ಮಂಜುನಾಥ.ಟಿ, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ಜಯರಾಮ ಕೆ.ಟಿ, ರಕ್ಷಿತ್, ಕರುಣಾಕರ, ಪೊಲೀಸ್ ಕಾನ್ಸ್ಟೇಬಲ್ ಗಳಾದ ಹೇಮರಾಜ್, ಸತೀಶ್, ಮನೋಜ್ ಕುಮಾರ್, ಮಹಿಳಾ ಪೊಲೀಸ್ ಕಾನ್ಸೆಬಲ್ ಸವಿತಾ ಮುಂತಾದವರು ಭಾಗವಹಿಸಿದ್ದರು.

Leave A Reply

Your email address will not be published.